ಹುಬ್ಬಳ್ಳಿ : ಕೆಲವು ತಿಂಗಳ ಹಿಂದೆ ಭಾರೀ ಸದ್ದು ಮಾಡಿದ್ದ 40% ಕಮಿಷನ್ ದಂಧೆ ವಿಚಾರ ಮತ್ತೊಮ್ಮೆ ಸದ್ದು 40% ಕಮಿಷನ್ ದಂಧೆಯಿಂದ ಬೇಸತ್ತು ದಯಾಮರಣ ಕೋರಿ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.
ಗುತ್ತಿಗೆದಾರ ಎ.ಬಸವರಾಜ ಎಂಬುವರು 40% ಕಮಿಷನ್ ದಂಧೆಗೆ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. 2021-22 ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಪರಿಕರ ಪೂರೈಸಿದ್ದರು. ಮೂಡಿಗೆರೆ ತಾಲೂಕಿಗೆ 27 ಲಕ್ಷ ರೂ. ಮೌಲ್ಯದ ಪರಿಕರ ಪೂರೈಸಿದ್ದರು. ಕಡೂರು ತಾಲೂಕಿಗೆ 85 ಲಕ್ಷ ರೂ. ಮೌಲ್ಯದ ಪರಿಕರ ಪೂರೈಸಿದ್ದರು.
ಕೋವಿಡ್ ಪರಿಕರ ಪೂರೈಸಿ 2 ವರ್ಷ ಕಳೆದರೂ ಬಿಲ್ ಪಾವತಿಸಿಲ್ಲ. ಮೂಡಿಗೆರೆ, ಕಡೂರು ತಾಲೂಕು ಪಂಚಾಯತ್. ಇಒಗಳು ಬಿಲ್ ಪಾವತಿಸಿಲ್ಲ. 40% ಗಿಂತಲೂ ಹೆಚ್ಚಿನ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಕಡೂರು ತಾ.ಪಂ. ಇಒ ದೇವರಾಜ್ ನಾಯಕ್ ಬೇಡಿಕೆ ಇಟ್ಟಿದ್ಆರೆ. ಕಮಿಷನ್ ನೀಡದ ಹಿನ್ನೆಲೆಯಲ್ಲಿ ಬಿಲ್ ಪಾವತಿಸಿಲ್ಲ. ಹೀಗಾಗಿ ದಯಾಮರಣ ಕೋರಿ ಗುತ್ತಿಗೆದಾರ ಬಸವರಾಜ ರಾಷ್ಟ್ರಪತಿ, ಪ್ರಧಾನಿ, ಸಿಎಂ ಗೆ ಪತ್ರ ಬರೆದಿದ್ದಾರೆ.