ಧಾರವಾಡ: ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಕಾಂಗ್ರೆಸ್ ನೆಲಸಮ ಆಗಲಿದೆ. ಜನರು ಅವರನ್ನು ಬೇರು ಸಮೇತ ಕಿತ್ತು ಹಾಕಲಿದ್ದಾರೆ ಎಂದು ಸಚಿವ ಶ್ರೀರಾಮುಲು ವಾಗ್ಧಾಳಿ ನಡೆಸಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕಕ್ಕೆ ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ಕೊಟ್ಟ ಬೂಸ್ಟರ್ ಡೋಸ್ ಫೇಲ್ ಆಗಿದೆ, ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಕಾಂಗ್ರೆಸ್ ನೆಲಸಮ ಆಗಲಿದೆ. ಜನರು ಅವರನ್ನು ಬೇರು ಸಮೇತ ಕಿತ್ತು ಹಾಕಲಿದ್ದಾರೆ ಎಂದು ಶ್ರೀರಾಮುಲು ಹೇಳಿದರು.
ರಾಹುಲ್ ಗಾಂಧಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಂದುಗೂಡಿಸುವ ವಿಚಾರದಲ್ಲಿ ಇದ್ದರು. ಕದನಗಳು ಆರಂಭವಾಗಿದೆ, ಅದಕ್ಕೆ ಸಂಧಾನ ಮಾಡಲು ಹಲವು ನಾಯಕರು ಬರುತಿದ್ದಾರೆ ಎಂದು ಲೇವಡಿ ಮಾಡಿದರು.
ನವೆಂಬರ್ 20ಕ್ಕೆ ಬೃಹತ್ ಸಮಾವೇಶ ಮಾಡುವ ಉದ್ದೇಶದಿಂದ ಆಹ್ವಾನ ಕೊಡಲು ನಾನು ಬಂದಿದ್ದೇನೆ. ನಾಲ್ಕು ದಶಕದ ಬೇಡಿಕೆ ನಮ್ಮ ಪ್ರಧಾನಿ ಹಾಗೂ ಸಿಎಂ ಈಡೇರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಶ್ರೀರಾಮುಲು ಹೇಳಿದರು.
Karnataka Rain: ರಾಜ್ಯದಲ್ಲಿ ಮತ್ತೆ ನ.2ರಿಂದ ಮಳೆ ಆರಂಭ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
BIGG NEWS : ಇನ್ಸ್ಪೆಕ್ಟರ್ ನಂದೀಶ್ ಸಾವು ಕೇಸ್ ಗೆ ಟ್ವಿಸ್ಟ್ : ಸಚಿವರ ಹೇಳಿಕೆಯಿಂದ ರಾಜ್ಯ ಸರ್ಕಾರಕ್ಕೆ ಸಂಕಷ್ಟ..?