ಚೆನ್ನೈ : ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಗುರುವಾರ 70 ವರ್ಷದ ವ್ಯಕ್ತಿಯೊಬ್ಬರು ಹುಂಜವನ್ನು ಬಲಿಕೊಡಲು ತೆರಳುತ್ತಿದ್ದಾಗ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮೃತನನ್ನು ರಾಜೇಂದ್ರನ್ ಎಂದು ಗುರುತಿಸಲಾಗಿದೆ. ಲಿಫ್ಟ್ ಅಳವಡಿಸಲು ಅಗೆದ 20 ಅಡಿ ಆಳದ ಗುಂಡಿಗೆ ಬಿದ್ದಿದ್ದಾನೆ. ಅವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು
ಮೃತ ರಾಜೇಂದ್ರನ್ ಅವರನ್ನು ಟಿ ಲೋಕೇಶ್ ಎಂಬುವವರು ಶುಕ್ರವಾರ ಗೃಹಪ್ರವೇಶ ಸಮಾರಂಭದ ಭಾಗವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸಲು ನೇಮಿಸಿಕೊಂಡರು. ವರದಿಯ ಪ್ರಕಾರ, ಲೋಕೇಶ್ ಇತ್ತೀಚೆಗೆ ಪಲ್ಲವರಂ ಬಳಿಯ ಪೊಝಿಚಲೂರ್ನಲ್ಲಿ ತನ್ನ ಮೂರು ಅಂತಸ್ತಿನ ಮನೆಯನ್ನು ನಿರ್ಮಿಸಿದ್ದರು.
ರಾಜೇಂದ್ರನ್ ರಕ್ತ ಬಲಿ ನೀಡಲು ಹುಂಜದೊಂದಿಗೆ ಮೂರನೇ ಮಹಡಿಯನ್ನು ತಲುಪುತ್ತಿದ್ದಂತೆ ಆಕಸ್ಮಾತ್ ಆಗಿ ಕೆಳಗೆ ತೋಡಿದ್ದ ಗುಂಡಿಗೆ ಬಿದ್ದಿದ್ದಾರೆ. ಕೋಳಿ ಬಲಿಗೆ ಹೋದವರು ಬರಲಿಲ್ಲ ಎಂದು ಲೋಕೇಶ್ ಹುಡುಕಲು ಹೋದಾಗ ಲಿಫ್ಟ್ ಅಳವಡಿಕೆಗಾಗಿ ಅಗೆದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿದರು. ಆದರೆ . ಹುಂಜವು ರಾಜೇಂದ್ರನ್ ನ ದೇಹದ ಮೇಲೆ ಯಾವುದೇ ಗಾಯಗಳಿಲ್ಲದೇ ನಿಂತಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ ಅಷ್ಟರಲ್ಲಿ ರಾಜೇಂದ್ರನ್ ಮೃತಪಟ್ಟಿದ್ದರು.
BREAKING NEWS : ವಿದೇಶಕ್ಕೆ ತೆರಳಲು ಮಾಜಿ ಸಚಿವ ರೋಷನ್ ಬೇಗ್ ಗೆ ಷರತ್ತುಬದ್ಧ ಅನುಮತಿ ನೀಡಿದ ಕೋರ್ಟ್ |Roshan baig