ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕನ್ನಡ ರಾಜ್ಯೋತ್ಸವ ಈ ಸಲ ಚಾಮರಾಜನಗರ ಉಸ್ತುವಾರಿ ಸಚಿವರಿಗೆ ಭಯ ತಂದೊಡ್ಡಿದೆ. ಇದಕ್ಕೆ ಪೂರಕ ಎಂಬಂತೆ ಇದೂವರೆಗೂ ಡಾ.ಅಂಬೇಡ್ಕರ್ ಕ್ರೀಡಾಂಗಣ ಅಲ್ಲಿ ಮಾಡಲಾಗುತ್ತಿದ್ದ ಕಾರ್ಯಕ್ರಮ ಈ ಸಲ ಜಿಲ್ಲಾ ಪೊಲೀಸ್ ಕವಾಯತು ಮೈದಾನಕ್ಕೆ ವರ್ಗಾವಣೆಯಾಗಿದೆ.
ಇದೇ ಕಾರಣ?: ಗುಂಡ್ಲುಪೇಟೆ ಹಂಗಳದಲ್ಲಿ ಮಹಿಳೆ ಮೇಲೆ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ವ್ಯಾಪಕ ವಿರೋದ ವ್ಯಕ್ತವಾದ ಹಿನ್ನಲೆಯಲ್ಲಿ ಈ ಸ್ಥಳ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಇದಲ್ಲದೇ ವಿವಿಧ ಕನ್ನಡ ಸಂಘಟನೆ ಅದರಲ್ಲೂ ರೈತಸಂಘದವರು ಕಪ್ಪು ಬಾವುಟ ಪ್ರದರ್ಶನ, ಮೊಟ್ಟೆ ಎಸೆತದಂತ ಬೆದರಿಕೆಯೊಡ್ಡಿದ ಹಿನ್ನಲೆಯಲ್ಲಿ ಖಾಕಿ ಸರ್ಪಗಾವಲಿನಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬರುವವರನ್ನು ನೋಡಿಕೊಳ್ಳಲಾಗುತ್ತಿದೆ.
ಇನ್ನೂ ಕನ್ನಡ ರಾಜೋತ್ಸವದ ಕಾರ್ಯಕ್ರಮಕ್ಕಾಗಿ ಜಿಲ್ಲಾಡಳಿತ ಆಹ್ವಾನ ಪತ್ರಿಕೆಯಲ್ಲಿ ಅದ್ವಾನದಲ್ಲಿ ಕೂಡಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಹಿಂದಿನ ಜಿಲ್ಲಾದಿಕಾರಿ ಚಾರುಲತಾ ಸೋಮಾಲ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಹೊಸಬರನ್ನ ನಿಯೋಜಿಸಿದೆ. ಆದರೆ ಹಳೆ ಜಿಲ್ಲಾದಿಕಾರಿ ಹೆಸರನ್ನ ಹಾಕಿರುವುದು ಅದಿಕಾರಿಗಳನ್ನಷ್ಟೆ ಅಲ್ಲ ಜನಸಾಮಾನ್ಯರ ಬೆರಗುಗೊಳಿಸಿದೆ ಈ ಜಿಲ್ಲಾಡಳಿತ ಎಂದರೆ ತಪ್ಪಾಗಲಾರದು.