ಬೆಂಗಳೂರು : ರೈಲ್ವೇ ಮಾರ್ಗದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಜನಶತಾಬ್ದಿ ರೈಲು ಸೇರಿ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ರೈಲುಗಳ ಓಡಾಟದಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಪ್ರಕಟಣೆ ಹೊರಡಿಸಲಾಗಿದೆ.
ದೇವರಗುಡ್ಡ – ಬ್ಯಾಡಗಿ ಮಾರ್ಗದಲ್ಲಿ ಲೈನ್ ಬ್ಲಾಕ್ ನಿರ್ವಹಣಾ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ. ಭಾನುವಾರ ನಾಳೆ ಕೆಎಸ್ಆರ್ ಬೆಂಗಳೂರು – ಹುಬ್ಬಳ್ಳಿ ಜನಶತಾಬ್ದಿ ರೈಲನ್ನು ಹರಿಹರದಿಂದ ಹುಬ್ಬಳ್ಳಿವರೆಗೂ ಸ್ಥಗಿತಗೊಳಿಸಲಾಗಿದ್ದು, ಬೆಂಗಳೂರಿನಿಂದ ಹರಿಹರವರೆಗೂ ಮಾತ್ರ ಸಂಚರಿಸಲಿದೆ. ಈ ರೈಲು ಹರಿಹರದಿಂದ ಬೆಂಗಳೂರಿಗೆ ಹಿಂದಿರುಗಲಿದೆ. ಬೆಳಗಾವಿ ಮೈಸೂರು ವಿಶ್ವಮಾನವ ಎಕ್ಸ್ಪ್ರೆಸ್ ಬೆಳಗಾವಿಯಿಂದ ರಾಣೆಬೆನ್ನೂರು ನಿಲ್ದಾಣವರೆಗೆ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬೆಂಗಳೂರಿನ ಏರ್ ಪೋರ್ಟ್ ಫ್ಲೈ ಓವರ್ ನಲ್ಲಿ ಭೀಕರ ಅಪಘಾತ : ಇಬ್ಬರು ಬೈಕ್ ಸವಾರರ ದುರ್ಮರಣ
ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರ: ಕಾನೂನು ತಜ್ಞರ ಮೊರೆ ಹೋಗ ರಾಜ್ಯ ಸರ್ಕಾರ