ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯಪೊಲೀಸರು ವಶಕ್ಕೆ ಪಡೆದಿದೆ.
BIGG NEWS: ಇಂದು ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ
ಅವರಿಗೆ ಈಗಾಗಲೇ ಮಡಿಕಲ್ ಟೆಸ್ಟ್ ಕೂಡ ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಪರಮಶಿವಯ್ಯಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. DySP ಕಚೇರಿಯಿಂದ ಜಿಲ್ಲಾಸ್ಪತ್ರೆಗೆ ಕರೆ ತಂದು ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಕೆಲವೇ ಹೊತ್ತಿನಲ್ಲಿ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.
BIGG NEWS: ಇಂದು ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ
DySP ಕಚೇರಿಯಲ್ಲಿ 4ನೇ ಆರೋಪಿ ಪರಮಶಿವಯ್ಯ ವಿಚಾರಣೆ ನಡೆಸಿ ನಂತರ ಜಡ್ಜ್ ಮುಂದೆ ಹಾಜರು ಪಡಿಸಲಾಗುತ್ತೆ. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಅ. 27ರಂದು ಸ್ವಾಮೀಜಿ ವಿರುದ್ಧ 694 ಪುಟಗಳ ಆರೋಪಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ದೂರು ದಾಖಲಾಗಿ 2 ತಿಂಗಳಾದ ನಂತರ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ತನಿಖೆಯೂ ಚುರುಕುಗೊಂಡಿದೆ.
BIGG NEWS: ಇಂದು ಅಪ್ಪು ಪುಣ್ಯಸ್ಮರಣೆ; ಅಭಿಮಾನಿಗಳಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾವುಕ ಪತ್ರ
ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಬಳಸುತ್ತಿದ್ದ ಕಚೇರಿ ಹಾಗೂ ವಿಶ್ರಾಂತಿ ಕೊಠಡಿಗಳಿಗೆ ಅ.28ರಂದು ಪೊಲೀಸರು ಭೇಟಿ ನೀಡಿ ಮಹಜರು ಮಾಡಿದರು. ಎರಡೂ ಕೊಠಡಿಗಳ ಕೀಲಿಯನ್ನು ಬಸವಪ್ರಭು ಸ್ವಾಮೀಜಿ ಪೊಲೀಸರಿಗೆ ಕೊಟ್ಟು, ತನಿಖೆಗೆ ಸಹಕರಿಸಿದರು. ಶಿವಮೂರ್ತಿ ಶರಣರ ವಿರುದ್ಧ ಆಗಸ್ಟ್ 26ರಂದು ಮೊದಲ ಪೋಕ್ಸೋ ಪ್ರಕರಣ ಮೈಸೂರಿನ ನಜರ್ಬಾದ್ ಠಾಣೆಯಲ್ಲಿ ದಾಖಲಾಗಿತ್ತು.