ಬೆಂಗಳೂರು: ಓಲಾ , ಉಬರ್ ಜೊತೆಗಿನ ಸಭೆ ಅಂತ್ಯಗೊಂಡಿದೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಇಲಾಖೆ ಆಯುಕ್ತ ಟಿಹೆಚ್ಎಂ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಎಂಎಸ್ ಬಿಲ್ಡಿಂಗ್ ನಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ 2 ಕಿ.ಮೀ.ಗೆ ಆಟೋ ದರ 100 ರೂ. ನಿಗದಿ ಮಾಡಲು ಮನವಿ ಮಾಡಲಾಗಿದೆ.
BIGG NEWS: ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು; ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಇದಕ್ಕೆ 30% ರಷ್ಟು ದರ ಹೆಚ್ಚಳ ಮಾಡಬೇಕು ಎಂದು ಕಂಪನಿಗಳು ಪಟ್ಟು ಹಿಡಿದಿವೆ. ಆದರೆ ಇದಕ್ಕೆ ಸಾರಿಗೆ ಅಧಿಕಾರಿಗಳು ನಮಗೆ ಈ ಬಗ್ಗೆ ಯಾವುದೇ ಮನವಿ ಬಂದಿಲ್ಲ ಎಂದಿದ್ದಾರೆ. ದರ ಹೆಚ್ಚಳ ಬಗ್ಗೆ ನಾವು ಈಗಾಗಲೇ ಹೆಚ್ಚುವರಿ ಆಯುಕ್ತ ಹೇಮಂತ್ ಕುಮಾರ್ ಅವರಿಗೆ ಮೇಲ್ ನಲ್ಲಿ ಮನವಿ ಮಾಡಿದ್ದೀವಿ ಎಂದು ಕಂಪನಿಗಳು ಸ್ಪಷ್ಟಪಡಿಸಿದ್ದಾರೆ.
BIGG NEWS: ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು; ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು RTO ಕಮೀಷನರ್ ಟಿಎಚ್ಎಂ ಕುಮಾರ್ ಹೇಳಿದ್ದಾರೆ. ಸಭೆಯಲ್ಲಿ ಸಾರಿಗೆ ಇಲಾಖೆಯಿಂದ ಕಂಪನಿಗಳ ದರ ಹೆಚ್ಚಳ ಮನವಿಗೆ ಒಪ್ಪಿಗೆ ಸೂಚಿಸಲಿಲ್ಲ. ಈ ಸಭೆಯ ಬಗ್ಗೆ ಹೈ ಕೋರ್ಟ್ ಗೆ ಮಾಹಿತಿ ನೀಡಲು ಸಾರಿಗೆ ಇಲಾಖೆ ಮುಂದಾಗಿದೆ. ನವೆಂಬರ್- 7 ರಂದು ಹೈ ಕೋರ್ಟ್ ನಲ್ಲಿ ದರಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಯಲಿದೆ.
BREAKING NEWS: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್; ಡೆತ್ ನೋಟ್ ನಲ್ಲಿ ಉಲೇಖಿಸಿದ್ದ ಸ್ವಾಮೀಜಿ ಪರಾರಿ