ಬೆಂಗಳೂರು: ನವೆಂಬರ್ 1ರಂದು ಪವರ್ ಸ್ಟಾರ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ.
BIGG NEWS: ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ
ನಗರದ ವಿಧಾನಸೌಧದಲ್ಲಿ ಈ ಸಮಾರಂಭ ನಡೆಯಲಿದೆ. ಕನ್ನಡ ರಾಜ್ಯೋತ್ಸವದ ದಿನವೇ ಅಪ್ಪುಗೆ ಈ ಗೌರವ ಸಲ್ಲಿಕೆ ಆಗುತ್ತಿದೆ. ಈ ಸಮಾರಂಭಕ್ಕೆ ಸಾಕ್ಷಿಯಾಗಲು ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ಆಗಮಿಸುವುದು ಖಚಿತ ಆಗಿದೆ. ಕರ್ನಾಟಕ ಸರ್ಕಾರದಿಂದ ಅವರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಸ್ವೀಕರಿಸಿರುವ ಅವರು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
BIGG NEWS: ವಿಜಯಪುರದಲ್ಲಿ ಮತ್ತೆ ಎರಡು ಬಾರಿ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ
ಅಂದಹಾಗೆ ಪುನೀತ್ ರಾಜ್ಕುಮಾರ್ ಅವರಿಗೆ ಎಲ್ಲ ಭಾಷೆಯ ಚಿತ್ರರಂಗದ ನಟರ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಎಲ್ಲರನ್ನೂ ಅವರು ಸಮಾನವಾಗಿ ಪ್ರೀತಿಸುತ್ತಿದ್ದರು. ಜೂನಿಯರ್ ಎನ್ಟಿಆರ್ ಜೊತೆಗೂ ಅವರು ಬಾಂಧವ್ಯ ಹೊಂದಿದ್ದರು.