ನವದೆಹಲಿ : ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಎಜ್ಯುಟೆಕ್ ಕಂಪನಿಗಳು ನಡೆಸುವ ಆನ್ ಲೈನ್ ಪಿಎಚ್ ಡಿ ಮಾನ್ಯತೆ ಇಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (UGC) ಮಹತ್ವದ ಆದೇಶ ಹೊರಡಿಸಿದೆ.
BREAKING NEWS : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ : ಜನರಲ್ಲಿ ಆತಂಕ
ವಿದೇಶಿ ವಿಶ್ವವಿದ್ಯಾಲಯಗಳ ಪಿಎಚ್ ಡಿ ಕೋರ್ಸ್ ಗಳನ್ನು ಒದಗಿಸಲು ನಿಯಮದ ಪ್ರಕಾರ ಸಾಧ್ಯವಿಲ್ಲ. ಆದ್ದರಿಂದ ಆನ್ ಲೈನ್ ಮೂಲಕ ಪಿಎಚ್ ಡಿ ಕೋರ್ಸ್ ಬಗ್ಗೆ ವಿವಿ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಯುಜಿಸಿ ಮತ್ತು ಎಐಸಿಟಿಇ ಸೂಚನೆ ನೀಡಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಂ.ಫಿಲ್ ಮತ್ತು ಪಿಎಚ್ ಡಿ ಕೋರ್ಸ್ ಗೆ ಸಂಬಂಧಿಸಿದಂತೆ 2016 ರಲ್ಲಿ ನಿಯಮಗಳನ್ನು ಸ್ಪಷ್ಟಪಡಿಸಲಾಗಿದೆ. ನಿಗದಿತ ಮಾನದಂಡಕ್ಕೆ ಹೊರತಾದ ಯಾವುದೇ ಪಿಎಚ್ ಡಿಗಳು ಅಮಾನ್ಯ ಎಂದಿದೆ.