ಬೆಂಗಳೂರು : ಕಾಂತಾರ’ (Kantara) ಸಿನಿಮಾಗ ಇಡೀ ವಿಶ್ವಕ್ಕೆ ಒಪ್ಪಿಗೆ ಆಗಿದೆ. ಎಲ್ಲೆಡೆ ಅದಕ್ಕೆ ಜನ ಮೆಚ್ಚುಗೆ ಸಿಕ್ಕಿದೆ. ಈ ಚಿತ್ರ ನೋಡಿ ಹೋಗಳದವರು ಇಲ್ಲ. ಮತ ಪ್ರಭಾಸ್, ಅನುಷ್ಕಾ ಶೆಟ್ಟಿ, ಕಂಗನಾ ರಣಾವತ್, ರಜನಿಕಾಂತ್, ವಿವೇಕ್ ಅಗ್ನಿಹೋತ್ರಿ, ಜಗ್ಗೇಶ್ ಮುಂತಾದ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆದರೆ ಈಗ ನಿಧಾನಕ್ಕೆ ಟೀಕೆಗಳು ಒಂದೊಂದಾಗಿ ಕೇಳಿಬರುತ್ತಿವೆ.
ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ!
ಈಗ ಈ ಸಿನಿಮಾದ ಕೆಲವು ಅಂಶಗಳ ಬಗ್ಗೆ ತಕರಾರು ತೆಗೆದಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಟನೆ, ನಿರ್ದೇಶನದ ‘ಕಾಂತಾರ’ ಚಿತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಹೈಪ್ ಸಿಕ್ಕಿದೆ ಎಂಬುದು ಕೆಲವರ ಅಭಿಪ್ರಾಯ. ಅಲ್ಲಿಂದ ಇನ್ನೊಂದು ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಅಭಿರೂಪ್ ಬಸು (Abhiroop Basu) ಅವರು, ‘ಕಾಂತಾರ’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ.
ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ!
ಎಕನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಅಭಿರೂಪ್ ಬಸು ಅವರು ಕೆಲ ವಿಚಾರಗಳನ್ನು ಎತ್ತಿದ್ದಾರೆ. ಅದೇನುಎಂದು ನೋಡೋಣ. ‘ ನಮ್ಮ ಜನರ ಬುದ್ಧಿವಂತಿಕೆಯನ್ನು ಈ ಸಿನಿಮಾ ಅಣಕಿಸುತ್ತದೆ ಎಂಬ ಭಾವನೆ ನನ್ನದು. ಚಿತ್ರವನ್ನು ಕಳಪೆಯಾಗಿ ಮಾಡಲಾಗಿದೆ. ಚಿತ್ರ ಪ್ರಗತಿಪರವಲ್ಲದ ರೀತಿಯಲ್ಲಿದೆ. ಕಥೆಯಲ್ಲಿನ ತಿರುವುಗಳು ತುಂಬ ಅಪ್ರಾಮಾಣಿಕವಾಗಿವೆ. ಸಿನಿಮಾ ಕೇವಲ ಗಿಮಿಕ್ ರೀತಿ ಇದೆ. ಹೀರೋ ಪಾತ್ರ ಒಳ್ಳೆಯವನಾಗಿ ಬದಲಾಗುವ ಸನ್ನಿವೇಶ ಹಾಸ್ಯಾಸ್ಪದವಾಗಿದೆ. ಅತಿಯಾಗಿ ಚರ್ಚೆ ಆಗಿರುವ ಕ್ಲೈಮ್ಯಾಕ್ಸ್ ಬಗ್ಗೆ ನನಗೆ ಆಸಕ್ತಿಯೇ ಉಳಿಯಲಿಲ್ಲ’ ಎಂದು ನಿರ್ದೇಶಕ ಅಭಿರೂಪ್ ಬಸು ಹೇಳಿದ್ದಾರೆ.
ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ!
ಥಿಯೇಟರ್ನಲ್ಲಿ ‘ಕಾಂತಾರ’ ಚಿತ್ರವನ್ನು ನೋಡಿದ ನಂತರ ಬಸು ಅವರು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈಗ ಅವರ ಹೇಳಿಕೆಗೂ ವಿರೋಧ ಕೇಳಿಬಂದಿದೆ. ಅವರ ಹೇಳಿಕೆಯ ವಿರುದ್ಧ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಕೂಡ ತಮ್ಮ ಹೇಳಿಕೆಗೆ ತಾವು ಬದ್ಧರಾಗಿರುವುದಾಗಿ ಅಭಿರೂಪ್ ಬಸು ತಿಳಿಸಿದ್ದಾರೆ.
ಎಲ್ಲೆಡೆ ಪೌರಾಣಿಕ ಪಾತ್ರಗಳಿಗೆ ವೈಜ್ಞಾನಿಕ ಪುರಾವೆಯನ್ನು ಹುಡುಕುತ್ತಿರುವ ಪರಿಸ್ಥಿತಿ ಇರುವಾಗ ಇದೆಲ್ಲ ಅಚ್ಚರಿ ಏನಲ್ಲ – ಎಂದು ಅವರು ಹೇಳಿದ್ದಾರೆ.
ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ!
ಇದೀಗ ಕಾಂತಾರ ಮೇಲೆ ಕೋರ್ಟು ವರಹಾ ರೂಪಂ ಹಾಡು ಬಳಸದಂತೆ ತಾಕೀತು ಮಾಡಿದೆಇತ್ತೀಚೆಗೆ ‘ವರಾಹ ರೂಪಂ..’ ಹಾಡಿನ ಬಗ್ಗೆಯೂ ಅನೇಕರಿಂದ ಟೀಕೆ ವ್ಯಕ್ತವಾಗಿತ್ತು. ಮಲಯಾಳಂನ ‘ನವರಸಂ..’ ಗೀತೆಯ ಟ್ಯೂನ್ ಅನ್ನು ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಕಾಪಿ ಮಾಡಿದ್ದಾರೆ ಎಂಬ ಆರೋಪ ಬಂದಿತ್ತು. ಈ ಕುರಿತು ‘ನವರಸಂ..’ ಗೀತೆಯನ್ನು ನಿರ್ಮಿಸಿದ ‘ತೈಕ್ಕುಡಂ ಬ್ರಿಡ್ಜ್’ ತಂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿತ್ತು. ‘ಯಾವುದೇ ರೀತಿಯಲ್ಲೂ ‘ತೈಕ್ಕುಡಂ ಬ್ರಿಡ್ಜ್’ ತಂಡವು ‘ಕಾಂತಾರ’ ಸಿನಿಮಾ ಜೊತೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿದೆ. ಇದಕ್ಕೆ ಕಾರಣವಾದವರ ವಿರುದ್ಧ ನಾವು ಕಾನೂನಿನ ಕ್ರಮಕ್ಕೆ ಒತ್ತಾಯಿಸುತ್ತೇವೆ’ ಎಂದು ‘ತೈಕ್ಕುಡಂ ಬ್ರಿಡ್ಜ್’ ಮಾಡಿದ ಪೋಸ್ಟ್ ವೈರಲ್ ಆಗಿತ್ತು. ಈಗ ಕೋರ್ಟು ಮಧ್ಯ ಪ್ರವೇಶಿಸಿದೆ. ಮುಂದೇನು ಆಗತ್ತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಅದೃಷ್ಟ ಬದಲಾಗಬೇಕೆಂದರೆ ಈ ಕಪ್ಪು ದಾರವನ್ನು ಗುಪ್ತವಾಗಿ ಇಲ್ಲಿ ಕಟ್ಟಿರಿ!