ಮೈಸೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರಿನಲ್ಲಿ ಭೇಟಿಯಾದ ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸಿದ್ದಾರೆ.
BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
ಎಂದಿನಂತೆ ಇಂದು ಬೆಳಗ್ಗೆ ಸಿದ್ದರಾಮಯ್ಯ ಅವರು ಮೈಸೂರಿನ ಆಂದೋಲನ ವೃತ್ತದ ಬಳಿ ಪಾರ್ಕ್ನಲ್ಲಿ ವಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಕೋಲಾರ ದಿಂದ ಬಂದ ಕಾರ್ಯಕರ್ತರು ಸಿದ್ದರಾಮಯ್ಯ ಜೊತೆ ಮಾತನಾಡಿದ್ದಾರೆ. ಅಲ್ಲದೆ ಮುಂದಿನ ಚುನಾವಣೆ ಗೆ ನೀವು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕಿದ್ದಾರೆ.
BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ
30ಕ್ಕೂ ಹೆಚ್ಚು ಕೈ ಕಾರ್ಯಕರ್ತರು ಕೋಲಾರದಿಂದ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಕಾರ್ಯಕರ್ತರು ಒತ್ತಾಯ ಮಾಡಿದಾಗ ಸಿದ್ದರಾಮಯ್ಯ ಅವರು, ಸರಿ ಒಂದು ದಿನ ಅಲ್ಲಿಗೆ ಬರುತ್ತೇನೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಮಾಜಿ ಸಿಎಂಗೆ ಹಾರ ಹಾಕಿ ಗೌರವಿಸಿ ಕಾರ್ಯಕರ್ತರು ವಾಪಸ್ಸಾಗಿದ್ದಾರೆ.
BIGG NEWS: ಕೋಟಿ ಕಂಠಗಳಲ್ಲಿ ಕನ್ನಡದ ಗಾನ; ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ