ಬೆಂಗಳೂರು: ಜಗತ್ತಿನೆಲ್ಲೆಡೆ ಕನ್ನಡ ಹಾಡುಗಳದೇ ಕಂಪನ. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮ ಕಣ ಕಣದಲ್ಲೂ ಕಂಪನ ಸೃಷ್ಟಿಸಿದೆ.
ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಅಭೂಪೂರ್ವ ಕಾರ್ಯಕ್ರಮ ಇಡೀ ನಾಡನ್ನ ಒಂದೇ ಸ್ವರದಡಿ ತಂದು ನಿಲ್ಲಿಸಿದೆ. ವಿಧಾನಸೌಧದ ಮೆಟ್ಟಿನಿಂದ ಸರ್ಕಾರಿ ಶಾಲೆಯ ಹೊಸ್ತಿಲವರೆಗೆ , ಏರ್ ಪೋರ್ಟ್ ಅಂಗಳದಿಂದ ಸಾಗರದ ಅಲೆಗಳ ನಡುವಿನವರೆಗೆ ಎಲ್ಲೆಡೆ ಕನ್ನಡ ಗಾನ ಮೊಳಗಿತ್ತು. ಇದು ಕೋಟಿ ಕಂಠ ಗಾಯನವಾದರೂ ಈಗಾಗಲೇ 1.125 ಕೋಟಿ ಮಂದಿ ನೋಂದಣಿ ಮಾಡಿಕೊಂಡು ಹಾಡಿದ್ದಾರೆ.