ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿ ಹೆಂಡ್ತಿಯೊಬ್ಬಳು ತನ್ನ ಲವರ್ ಜೊತೆಗೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಬೆಂಗಳೂರಿಲ್ಲಿ ನಡೆದಿದೆ. ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಆಂದ್ರ ಮೂಲಕದ ಸುರೇಶ್ನನ್ನು ಬಂಧಿಸಿದ್ದಾರೆ.
ಯಲಹಂಕದ ಕೊಂಡಪ್ಪಲೇಔಟ್ ನಿವಾಸಿ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಯಲ್ಲಿ ಅ.21ರಂದು ತನ್ನ ಅಳಿಯ ಚಂದ್ರಶೇಖರ್ನನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆಂದು ದೂರು ನೀಡಿದ್ದರು, ಈ ವೇಳೆಯಲ್ಲಿ, ತನಿಖೆ ನಡೆಸಿದ ಪೋಲಿಸರು, ಕೊಲೆಯಾದ ಚಂದ್ರಶೇಖರ್ ಪತ್ನಿ ಶ್ವೇತಾಳಿಂದಲೇ ನಡೆದಿದೆ ತಿಳಿದುಕೊಂಡು ಶ್ವೇತಾಳನ್ನು ವಶಕ್ಕೆ ಪಡೆದು ಎಲ್ಲವನ್ನು ಕಕ್ಕಿಸಿದ್ದಾರೆ. ಇನ್ನೂ ಶ್ವೇತಾ ಮತ್ತು ಸುರೇಶ್ ಮೊದಲಿಂದಲೂ ಪ್ರೀತಿಸುತ್ತಿದ್ದರು, ಆದರೆ ಶ್ವೇತಾಳಿಗೆ ಬಲವಂತವಾಗಿ ಮದುವೆ ಮಾಡಿದ್ದರು ಎನ್ನಲಾಗಿದೆ. ಈ ನಡುವೆ ಮದುವೆ ಬಳಿಕ ಕೂಡ ಇಬ್ಬರ ನಡುವೆ ಕುಚ್ ಕುಚ್ ಮುಂದುವರೆದಿದೆ. ಈ ನಡುವೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.