ಸ್ಯಾನ್ ಫ್ರಾನ್ಸಿಸ್ಕೋ: ಟೆಸ್ಲಾ ಸಿಇಒ ಎಲಾನ್ ಮಸ್ಕ್(Elon Musk) ಅವರು ಟ್ವಿಟರ್(Twitter) ಕಂಪನಿಯನ್ನು ಕೊನೆಗೂ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಪಕ್ಕಾ ಆಗುತ್ತಿದ್ದಂತೇ ಅದರ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ಯುಎಸ್ ಮಾಧ್ಯಮ ಗುರುವಾರ ತಡವಾಗಿ ವರದಿ ಮಾಡಿದೆ.
ಮಸ್ಕ್ ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Twitter CEO Parag Agrawal and chief financial officer Ned Segal ‘have left the company’s San Francisco headquarters and will not be returning’, reports US media
— ANI (@ANI) October 28, 2022
ಮೂಲಗಳ ಪ್ರಕಾರ, ಮಸ್ಕ್ ಅವರೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಟ್ವಿಟ್ಟರ್ ಕಂಪನಿಯ ಸ್ಯಾನ್ ಫ್ರಾನ್ಸಿಸ್ಕೋ ಮುಖ್ಯ ಕಚೇರಿ ವಕ್ತಾರರು ಸಿಇಒ ಹಾಗೂ ಸಿಎಫ್ಒ ಕಂಪನಿ ತೊರೆದಿರುವುದನ್ನು ಖಚಿತಪಡಿಸಿದ್ದಾರೆ.
ಗುರುವಾರ, ಮಸ್ಕ್ ಅವರು ‘ನಾನು ಪ್ರೀತಿಸುವ ಹೆಚ್ಚು ಮಾನವೀಯತೆಗೆ ಸಹಾಯ ಮಾಡಲು ಪ್ರಯತ್ನಿಸಲು’ ಟ್ವಿಟರ್ ಅನ್ನು ಖರೀದಿಸುತ್ತಿದ್ದೇನೆ ಎಂದು ಹೇಳಿದ್ದರು.
ಮಸ್ಕ್ ಈ ಹಿಂದೆ ಟ್ವಿಟ್ಟರ್ ಕಂಪನಿಯ ಉದ್ಯೋಗಿಗಳನ್ನು ಕಡಿತಗೊಳಿಸುವ ಬಗ್ಗೆ ಯೋಜಿಸುತ್ತಿರುವುದಾಗಿ ಸುಳಿವು ನೀಡಿದ್ದರು.
ಗ್ರಾಹಕರ ಗಮನಕ್ಕೆ: SBIನ ʻUTSAV ಠೇವಣಿʼ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದೇ ಕೊನೆ ದಿನ… ಇಲ್ಲಿದೆ ಪ್ರಮುಖ ಮಾಹಿತಿ
ಯುಎಸ್ನಲ್ಲಿ ಭೀಕರ ಅಪಘಾತ: ಮೂವರು ಭಾರತೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು
ಗ್ರಾಹಕರ ಗಮನಕ್ಕೆ: SBIನ ʻUTSAV ಠೇವಣಿʼ ಯೋಜನೆಯಲ್ಲಿ ಹೂಡಿಕೆ ಮಾಡಲು ಇಂದೇ ಕೊನೆ ದಿನ… ಇಲ್ಲಿದೆ ಪ್ರಮುಖ ಮಾಹಿತಿ