ಟಿ20 ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ರನ್ ಗಳ ಜಯ ಸಾಧಿಸಿದ ಟೀಮ್ ಇಂಡಿಯಾ
ನವದೆಹಲಿ: ಪ್ರಸ್ತುತ ಅಸೀಸ್ನಲ್ಲಿ ನಡೆಯುತ್ತಿರುವ ಟಿ 20 ವಿಶ್ವಕಪ್ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಮಣಿಸಿದ ಭಾರತ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ನೆದರ್ಲೆಂಡ್ಸ್ ವಿರುದ್ಧ ಭಾರತ ತಂಡವು 56 ರನ್ ಗಳಿಂದ ದೊಡ್ಡ ಗೆಲುವು ಸಾಧಿಸಿದೆ.
ಭಾರತ ನೀಡಿದ್ದ 180 ರನ್ಗಳ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ 20 ಓವರ್ಗಳಲ್ಲಿ ಕೇವಲ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಟಿಮ್ ಪ್ರಿಂಗಲ್ ತಂಡದ ಪರ ಅತ್ಯಧಿಕ ಸ್ಕೋರರ್ ಆಗಿದ್ದರು. 15ಎಸೆತಗಳನ್ನು ಎದುರಿಸಿದ ಪ್ರಿಂಗಲ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 20 ರನ್ ಗಳಿಸಿದರು. ಅದೇ ಸಮಯದಲ್ಲಿ, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಈ ಪಂದ್ಯದಲ್ಲಿ ಕ್ರಮವಾಗಿ ಎರಡು ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.
ಪಂಚರತ್ನ ರಥಯಾತ್ರೆ: ಬೆಂಗಳೂರಿನಲ್ಲಿ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಜೆಡಿಎಸ್ ನ ( JDS Party ) ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಗುರುವಾರ ಬಸವನಗುಡಿಯ ಶ್ರೀ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ ಮಾಡಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಇಂದು ಬೆಳಗ್ಗೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ರಥಯಾತ್ರೆಗೆ ಚಾಲನೆ ನೀಡಿದರು.
ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲಾಗಿದೆ. ಗುರುವಾರ ಅತ್ಯಂತ ಒಳ್ಳೆಯ ದಿನವಾಗಿದೆ. 1994ರಲ್ಲಿ ದೇವೇಗೌಡರು ಕೂಡ ಇಲ್ಲಿ ಪೂಜೆ ನಡೆಸಿ ಚುನಾವಣೆಗೆ ಹೋಗಿದ್ದರು ಎಂದರು.
ನವೆಂಬರ್ 1ರಂದು ಮುಳಬಾಗಿಲಿನ ಕುರುಡುಮಲೆಯಲ್ಲಿ ಪಂಚರತ್ನ ರಥಯಾತ್ರೆ ಪೂರ್ಣ ಪ್ರಮಾಣದಲ್ಲಿ ಶುರುವಾಗಲಿದೆ. ಅಂದು ಅಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಅದಕ್ಕೂ ಮುನ್ನ, ಅಂದರೆ ನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಲಾಗುತ್ತಿದೆ. ಗಾಂಧಿನಗರದಲ್ಲಿ ಸಾಂಕೇತಿಕವಾಗಿ ರಥಯಾತ್ರೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ 35 ದಿನಗಳ ಕಾಲ ರಥಯಾತ್ರೆ ಮಾಡಲಾಗುತ್ತದೆ ಎಂದು ಹೇಳಿದರು.
ಯುಪಿ ಸಿಎಂ ಆದಿತ್ಯನಾಥ್ ವಿರುದ್ಧ ದ್ವೇಷ ಭಾಷಣ ಮಾಡಿದ ಎಸ್ಪಿಯ ಅಜಂ ಖಾನ್ಗೆ 3 ವರ್ಷ ಜೈಲು ಶಿಕ್ಷೆ
ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರಿಗೆ ದ್ವೇಷ ಭಾಷಣ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಂಪುರದ ವಿಶೇಷ ಸಂಸದ/ಶಾಸಕರ ನ್ಯಾಯಾಲಯ ಗುರುವಾರ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2019 ರ ಪ್ರಕರಣವು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಆಗಿನ ಡಿಎಂ ಐಎಎಸ್ ಔಂಜನೇಯ ಕುಮಾರ್ ಸಿಂಗ್ ಅವರ ವಿರುದ್ಧ ಖಾನ್ ಮಾಡಿದ “ಪ್ರಚೋದನಕಾರಿ ಹೇಳಿಕೆಗಳಿಗೆ” ಸಂಬಂಧಿಸಿದೆ.
ಖಾನ್ ಮತ್ತು ಇತರ ಇಬ್ಬರಿಗೆ ನ್ಯಾಯಾಲಯವು 2,000 ರೂ.ಗಳ ದಂಡವನ್ನು ವಿಧಿಸಿದೆ. ಮಿಲಾಕ್ ಕೋಟ್ವಾಲಿಯಲ್ಲಿ ಖಾನ್ ವಿರುದ್ಧ ಐಪಿಸಿಯ ಸೆಕ್ಷನ್ 153 ಎ (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505-1 (ಸಾರ್ವಜನಿಕ ಕಿಡಿಗೇಡಿತನಕ್ಕೆ ಪ್ರಚೋದನೆ ನೀಡುವ ಹೇಳಿಕೆ) ಮತ್ತು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೆಡ್ ಬುಷ್ ಸಿನಿಮಾದ ವಿವಾದ ಅಂತ್ಯ, ಸಂಧಾನ ಸಫಲ, ವಿವಾದತ್ಮಕ ಡೈಲಾಗ್ ಕತ್ತರಿಗೆ ಒಪ್ಪಿಗೆ
ಬೆಂಗಳೂರು: ಹೆಡ್ ಬುಷ್ ಸಿನಿಮಾ ಸಂಧಾನ ಸಫಲವಾಗಿದ್ದು, , ವಿವಾದತ್ಮಕ ಡೈಲಾಗ್ ಕತ್ತರಿಗೆ ಚಿತ್ರ ತಂಡ ಒಪ್ಪಿಗೆ ನೀಡಿದೆ. ಇಂದು ಬೆಂಗಳೂರಿನ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಜುಜುಬಿ ಕರಗ ಪದ ಮ್ಯೂಟ್ ಮಾಡಲು ಚಿತ್ರ ತಂಡ ಒಪ್ಪಿಕೊಂಡಿದೆ.
ಸಂಧಾನ ಸಭೆ ಬಳಿಕ ಮಾತನಾಡಿದ ಸಿನಿಮಾದ ನಟ, ಹಾಗೂ ನಿರ್ಮಾಪಕ ಧನಂಜಯ್ ಅವರು ಮಾತನಾಡಿ, ಯಾರನ್ನು ನೋವು ಮಾಡುವುದು ನಮ್ಮ ಉದ್ದೇಶವಾಗಿಲ್ಲ, ಬೇಸರವಾಗಿರುವ ಪದವನ್ನು ಮ್ಯೂಟ್ ಮಾಡುವುದಕ್ಕೆ ಒಪ್ಪಿಗೆ ನೀಡಿದ್ದೇವೆ. ಸಮಸ್ಯೆಯನ್ನು ಬಗೆಹರಿಸಲು ಸಹಕರ ನೀಡಿದ ಎಲ್ಲರಿಗೂ ಧನ್ಯವಾದವನ್ನು ಹೇಳಿದರು. ಇದೇ ವೇಳೇ ಅವರು ನೊಂದವರ ಪರವಾಗಿ ಎಲ್ಲರ ಪರವಾಗಿ ನಿಂತುಕೊಂಡಿದ್ದಾರೆ, ನನಗೆ ಶಕ್ತಿ ತುಂಬಿದ್ದಾರೆ, ನನಗೆ ಪ್ರೀತಿ ತೋರಿಸಿದ, ಕೈಹಿಡಿದ ಕನ್ನಡಿಗರಿ ಧನ್ಯವಾದಗಳು, ನನ್ನಂತಹವರು ನೂರಾರು ಜನರು ಬರುತ್ತಾರೆ, ಎಲ್ಲರೂ ಕನಸುಗಳನ್ನು ಇಟ್ಟುಕೊಂಡು ಬರುತ್ತಾರೆ, ಅಂತಹವರಿಗೆ ನನ್ನ ಮಾತು ಶಕ್ತಿ ಆಗಲಿ ಅಂತ, ಇದಲ್ಲದೇ ನಾನು ನನ್ನ ತಂಡದಿಂದ ಹೊಸಬರಿಗೆ ಅವಕಾಶ ನೀಡುವೆ ಅಂತ ತಿಳಿಸಿದರು. ಇನ್ನೂ ಬಡವರ ಮನೆ ಮಕ್ಕಳು ಬೆಳೀಬೇಕು ಅಂತ ತಿಳಿಸಿದರು.
ನ.1 ರಂದು ಪುನೀತ್ ರಾಜ್ಕುಮಾರ್ಗೆ ಸೂಪರ್ ಸ್ಟಾರ್ ರಜನಿಕಾಂತ್ ರಿಂದ ಕರ್ನಾಟಕ ರತ್ನ ಪ್ರಶಸ್ತಿ; ಸುಳಿವು ನೀಡಿದ ಸಿಎಂ
ಬೆಂಗಳೂರು: ನವೆಂಬರ್ 1 ರಂದು ನಟ ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.ಸೂಪರ್ ಸ್ಟಾರ್ ರಜನಿಕಾಂತ್ ರಿಂದ ಪುನೀತ್ ರಾಜ್ ಕುಮಾರ್ ಕರ್ನಾಟಕ ರತ್ನ ಪ್ರದಾನ ಮಾಡಲಾಗಿದೆ.
ವಿಧಾನಸೌಧದ ಮುಂಬಾಗದಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಪುನೀತ್ ರಾಜ್ ಕುಮಾರ್ ಸೂಪರ್ ಸ್ಟಾರ್ ರಜನಿ ಕಾಂತ್ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಆಗಮಿಸುವ ಸಾಧ್ಯತೆ ಇದೆ. ತಲೈವಾ ಆಗಮನದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ಕೊಟ್ಟಿದ್ದಾರೆ. ದೊಡ್ಮನೆ ಕುಟುಂಬಕ್ಕೆ ಪ್ರಶಸ್ತಿಯನ್ನು ರಜನಿಕಾಂತ್ ನೀಡಲಿದ್ದಾರೆ.ಮೂರ್ನಾಲ್ಕು ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸ್ತಿವಿ. ನಟ ರಜನಿಕಾಂತ್ ಕೂಡ ಆಹ್ವಾನಿಸ್ತೀವಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.