ನವದೆಹಲಿ : ಭಾರತೀಯ ವಾಯುಪಡೆಯ (IAF) C-295 ಸಾರಿಗೆ ವಿಮಾನವನ್ನು ಭಾರತದಲ್ಲಿ ತಯಾರಿಸಲಾಗುವುದು. ಐಎಎಫ್ನ ಸಾರಿಗೆ ವಾಹಕವನ್ನು ಟಾಟಾ-ಏರ್ಬಸ್ ಗುಜರಾತಿನ ವಡೋದರಾದಲ್ಲಿ ತಯಾರಿಸಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ
ಅಕ್ಟೋಬರ್ 30 ರಂದು ಗುಜರಾತಿನ ವಡೋದರಾದಲ್ಲಿ ಸಿ-295 ಸಾರಿಗೆ ವಿಮಾನ ತಯಾರಿಕಾ ಘಟಕಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಪ್ರಕಾರ, ಬರೋಡದಲ್ಲಿರುವ ಈ ಸೌಲಭ್ಯವು 40 ವಿಮಾನಗಳನ್ನು ತಯಾರಿಸುವುದರ ಜೊತೆಗೆ ವಾಯುಪಡೆಯ ಅವಶ್ಯಕತೆಗಳಿಗಾಗಿ ಹೆಚ್ಚುವರಿ ವಿಮಾನಗಳನ್ನು ತಯಾರಿಸುತ್ತದೆ ಎಂದು ತಿಳಿದು ಬಂದಿದೆ.
C-295 transport aircraft for the Indian Air Force to be manufactured by Tata-Airbus at Vadodara in Gujarat: Defence Officials pic.twitter.com/0txKqTlDIX
— ANI (@ANI) October 27, 2022
ಈ ಸುದ್ದಿ ಈಗ ತಾನೆ ಬಂದಿದೆ. ವರದಿಯ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಅಪ್ ಡೇಟ್ ಮಾಡಲಾಗುವುದು. ಮರಳಿ ನಮ್ಮ ಪೇಜಿಗೆ ಭೇಟಿ ನೀಡಿ.