ವಾಷಿಂಗ್ಟನ್: ಮಕ್ಕಳು ಹೆಚ್ಚಾಗಿ ವಿಡಿಯೋ ಗೇಮ್ ಆಡಿದರೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಮತ್ತು ಅವರು ಇತರರೊಂದಿಗೆ ಬೆರೆಯಲು ಕಷ್ಟವಾಗುತ್ತದೆ ಎಂಬುದು ಪೋಷಕರ ಆತಂಕವಾಗಿರುತ್ತದೆ. ಆದರೆ, ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಡಿಯೋ ಗೇಮ್ನಿಂದ ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ತಲೆದೋರುತ್ತವೆ ಎಂಬ ವಿಚಾರವನ್ನು ತಳ್ಳಿಹಾಕಿದ್ದಾರೆ.
ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ
ವಿಡಿಯೋ ಗೇಮ್ ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವರ್ಮೊಂಟ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದು, ಅಚ್ಚರಿ ಮೂಡಿಸಿದೆ. ತಮ್ಮ ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ಎರಡು ಸಾವಿರ ಸಂಖ್ಯೆಯ 9 ಮತ್ತು 10 ವರ್ಷದ ಮಕ್ಕಳ ಮೆದುಳಿನ ಕಾರ್ಯವನ್ನು ಪರೀಕ್ಷಿಸಿದರು.
ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ
ಮಕ್ಕಳ ಮೆದುಳಿನ ಸ್ಕ್ಯಾನ್ಗಳನ್ನು ವಿಶ್ಲೇಷಿಸಿ ಅವನ್ನು ಇತರ ಮಕ್ಕಳಿಗೆ ಹೋಲಿಸಿದರು. ಈ ಸಂಶೋಧನೆಯ ನಂತರ ಅಚ್ಚರಿಯ ವಿಷಯಗಳು ಬೆಳಕಿಗೆ ಬಂದಿವೆ. ನಿತ್ಯ ಮೂರು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿಡಿಯೋ ಗೇಮ್ಗಳನ್ನು ಆಡುವ ಮಕ್ಕಳ ಮೆದುಳು ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ಸಂಶೋಧಕ ಬಾಡರ್ ಚಾರನಿ ಹೇಳಿದ್ದಾರೆ.
ಕ್ಯಾಬ್ ವಿಳಂಬವಾಗಿದ್ಕೆ ಫ್ಲೈಟ್ ಮಿಸ್: ಮಹಿಳೆಗೆ 20,000 ರೂ. ನೀಡುವಂತೆ ʻಉಬರ್ʼ ಸಂಸ್ಥೆಗೆ ನ್ಯಾಯಾಲಯ ಆದೇಶ