ಕಾನ್ಪುರ(ಉತ್ತರ ಪ್ರದೇಶ): ಉತ್ತರ ಪ್ರದೇಶದ ವಿಲಕ್ಷಣ ಘಟನೆಯೊಂದು ಬೆಕಿಗೆ ಬಂದಿದೆ. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಪತ್ನಿಯನ್ನು ರಕ್ಷಿಸುವ ಬದಲು ವ್ಯಕ್ತಿಯೊಬ್ಬ ಮೊಬೈಲ್ನಲ್ಲಿ ವಿಡಿಯೋ ಮಾಡುತ್ತಾ ಕುಳಿತ. ಆದ್ರೆ, ಇತ್ತ ಪತ್ನಿಯ ಪ್ರಾಣ ಪಕ್ಷಿ ಹಾರಿ ಹೋಗಿರುವ ಘಟನೆ ನಡೆದಿದೆ.
ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ಕುಟುಂಬಕ್ಕೆ ಪತಿ ವಿಡಿಯೋ ತೋರಿಸಿದ್ದು, ಆಗ ಘಟನೆ ಬೆಳಕಿಗೆ ಬಂದಿದೆ.
ಮೃತಳನ್ನು ಶೋಬಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಸಂಜಯ್ ಮತ್ತು ಶೋಬಿತಾ ಗುಪ್ತಾ ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ಸಂಜಯ್ ಗುಪ್ತಾ ತೆಗೆದ ಮೊಬೈಲ್ ಫೋನ್ ವೀಡಿಯೊದಲ್ಲಿ, ಶೋಬಿತಾ ಬೆಡ್ರೂಮ್ನ ಹಾಸಿಗೆಯ ಮೇಲೆ ನಿಂತು ಫ್ಯಾನ್ಗೆ ನೇಣು ಹಾಕಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ತನ್ನ ಮೊದಲ ಪ್ರಯತ್ನದಲ್ಲಿ ಶೋಬಿತಾ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ. ಆದ್ರೆ, ಈ ವೇಳೆ ಸಂಜಯ್ ಗುಪ್ತಾ ಅವಳನ್ನು ತಡೆಯಲು ಪ್ರಯತ್ನಿಸುವುದಿಲ್ಲ.
पति वीडियो बनाता रहा, पत्नी ने फांसी लगाकर दी जान। वायरल वीडियो कानपुर का है.@Uppolice #Kanpur #Lakshmi #Religion pic.twitter.com/Ujl3ep5wwH
— rajni singh (@imrajni_singh) October 26, 2022
ಶೋಬಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಂಗಳವಾರ ಅಳಿಯನಿಂದ ಕರೆ ಬಂದಿದೆ ಎಂದು ಶೋಬಿತಾ ತಂದೆ ರಾಜ್ ಕಿಶೋರ್ ಗುಪ್ತಾ ಹೇಳುತ್ತಾರೆ. ನಾವು ಕೂಡಲೇ ಮನೆಗೆ ಹೋದೆವು ಶೋಬಿತಾ ಮೃತದೇಹ ಹಾಸಿಗೆಯ ಮೇಲಿತ್ತು. ಮನೆಗೆ ಬಂದ ಶೋಬಿತಾ ಕುಟುಂಬಕ್ಕೆ ಸಂಜಯ್ ಗುಪ್ತಾ ತೆಗೆದ ವೀಡಿಯೊವನ್ನು ತೋರಿಸಿದ್ದಾನೆ. ಶೋಬಿತಾ ನೇಣು ಹಾಕಿಕೊಳ್ಳುತ್ತಿರುವುದನ್ನು ವಿಡಿಯೋ ಮಾಡುವ ಬದಲು ಆಕೆಯನ್ನು ಉಳಿಸಬಹುದಿತ್ತು ಎಂದು ಶೋಬಿತಾ ಕುಟುಂಬ ಹೇಳಿದೆ.
ಶೋಬಿತಾಳನ್ನು ಕೂಡಲೇ ಮನೆಯವರು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಯನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.