ಬೆಂಗಳುರು : ವಿಧವೆ ತಾಯಿಗೆ ಮಗನ ಆಸ್ತಿಯಲ್ಲೂ ಸಮಾನ ಪಾಲಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಶೇಷ ಪ್ರಕರಣವೊಂದರಲ್ಲಿ ‘ವಿಧವೆಯಾಗಿರುವ ಮಹಿಳೆ ತನ್ನ ಗಂಡದ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಹಂಚುವ ವೇಳೆ ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತಪಟ್ಟಿದ್ದರೆ ಆ ಮೃತ ಮಗನ ಪಾಲಿನ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾನೆ’ ಎಂದು ಹೈಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ..?
ಬೀದರ್ ನಲ್ಲಿ ಹನುಮಂತರೆಡ್ಡಿ ಮತ್ತು ಈರಮ್ಮ ದಂಪತಿ ಕುಟುಂಬ ವಾಸವಿತ್ತು. ಅವರಿಗೆ ಹನುಮಂತರೆಡ್ಡಿ ಮತ್ತು ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ, ಬಸವ ರೆಡ್ಡಿ ಎಂಬ ಮಕ್ಕಳಿದ್ದು, ಇವರಲ್ಲಿ ಭೀಮರೆಡ್ಡಿ ಎಂಬಾತ ಮೃತಪಟ್ಟಿದ್ದಾರೆ.ಇನ್ನ, ಈರಮ್ಮನ ಪತಿ ಹನುಂತರೆಡ್ಡಿ ಕೂಡ ನಿಧನರಾಗಿದ್ದಾರೆ. ಮೊದಲು ಎಲ್ಲವೂ ಚೆನ್ನಾಗಿ ಇತ್ತು, ಆದರೆ ದಿನದಿಂದ ದಿನಕ್ಕೆ ಸಂಸಾರದಲ್ಲಿ ಆಸ್ತಿ ಕಲಹ ಶುರುವಾಗಿದ್ದು, ಪ್ರಕರಣ ಕೋರ್ಟ್ ವರೆಗೂ ಹೋಗಿದೆ. ಸ್ಥಳೀಯ ಕೋರ್ಟ್ ಸಮಾಧಾನ ತರದ ಹಿನ್ನೆಲೆ ಈರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು, ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಮಹತ್ತರದ ಆದೇಶ ಹೊರಡಿಸಿದೆ.
ಏನದು ಕೋರ್ಟ್ ಆದೇಶ..?
ಮೊದಲ ಹಂತದಲ್ಲಿ ಹನುಮಂತರೆಡ್ಡಿ ಅವರ ಆಸ್ತಿಯನ್ನು ಹನುಮಂತರೆಡ್ಡಿ ಹಾಗೂ ಅವರ ನಾಲ್ಕು ಮಕ್ಕಳು ಸೇರಿ 5 ಪಾಲು ಮಾಡಬೇಕು.ಎರಡನೇ ಹಂತದಲ್ಲಿ ಹನುಮಂತರೆಡ್ಡಿ ಅವರಿಗೆ ಬಂದಿರುವ ಆಸ್ತಿಯಲ್ಲಿ ಆತನ ಪತ್ನಿ ಈರಮ್ಮ ಮತ್ತು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಮೂರನೇ ಹಂತದಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಮೃತಪಟ್ಟ ಭೀಮರೆಡ್ಡಿಗೆ ಬಂದಿರುವ ಆಸ್ತಿಯಲ್ಲಿ ಭೀಮರೆಡ್ಡಿ ಪತ್ನಿ, ಪುತ್ರಿ ಹಾಗೂ ತಾಯಿ ವಿಧವೆ ಈರಮ್ಮನವರಿಗೆ ಸಮಾನ ಹಂಚಿಕೆಯಾಗಬೇಕು. ಆಗ ತನ್ನ ಪತಿಯ ಪಾಲಿಗೆ ಬಂದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಮತ್ತು ಭೀಮರೆಡ್ಡಿ ಪಾಲಿಗೆ ಬಂದಿರುವ ಆಸ್ತಿಯಲ್ಲಿನ ಭಾಗ ಸೇರಿ ವಿಧವೆ ತಾಯಿಗೆ ಆಸ್ತಿ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ಸೂಚನೆ ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.