ತುಮಕೂರು: ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ. ಇದರಿಂದ ಹಿಂದೂ ಧರ್ಮಕ್ಕೆ ಧಕ್ಕೆ ತಂದೊದೆ ಎಂದು ಆರೋಪಿಸಲಾಗಿದೆ.
ಹೀಗಾಗಿ ಬಜರಂಗದಳ ಕಾರ್ಯಕರ್ತರು ಡಾಲಿ ಧನಂಜಯ್ ಕಟೌಟ್ಗೆ ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಿಪಟೂರು ನಗರದ ಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ನಡೆದಿದೆ.ಡಾಲಿ ಧನಂಜಯ ಕ್ಷಮೆ ಕೇಳಬೇಕು ಹಾಗೂ ಚಿತ್ರದಿಂದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ. ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಸಿನಿಮಾದಲ್ಲಿ ಕರಗ ಮತ್ತು ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಿನಿಮಾ ಬೈಕಾಟ್ ಕೂಗು ಒಂದೆಡೆ ಕೇಳಿಬಂದಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಡಾಲಿ ಧನಂಜಯ್ ಪರವಾಗಿದ್ದೇವೆ ಎಂಬ ಧ್ವನಿ ಎತ್ತಿದ್ದಾರೆ.
I watched #HeadBush first day itself, there is nothing disrespecting veeragase in the movie. #WeStandWithDhananjaya pic.twitter.com/22hNiIrh4o
— Gopi (@gopcma) October 26, 2022