ರಾಮನಗರ : ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಂಡೆಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಟ್ವಿಸ್ಟ್ ಸಿಗುತ್ತಿದೆ. ಡೆತ್ ನೋಟ್ ಪತ್ತೆ ಬೆನ್ನಲ್ಲೇ ವಿಡಿಯೋ ಚಾಟ್ ಲೀಕ್ ಆಗುವ ಮೂಲಕ ಕೇಸ್ ಇನ್ನಷ್ಟು ಗೊಂದಲ ಮೂಡಿಸಿದೆ.
ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಗೆ ಬಲಿಯಾಗಿರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ. ಸ್ವಾಮೀಜಿ, ಮಹಿಳೆಯೊಂದಿಗೆ ವೀಡಿಯೋ ಕಾಲ್ನಲ್ಲಿ ಮಾತನಾಡುತ್ತಿದ್ದ ಅಶ್ಲೀಲ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಶ್ರೀ ಕಂಚುಗಲ್ ಬಂಡೇಮಠದ ಗುರು ಮಡಿವಾಳೇಶ್ವರ ಬಸವಲಿಂಗ ಸ್ವಾಮೀಜಿ ಸ್ವಾಮೀಜಿ(45) ಮಠದಲ್ಲೇ ಸೋಮವಾರ ನೇಣಿಗೆ ಶರಣಾಗಿದ್ದರು. ಇದೀಗ ಸ್ವಾಮೀಜಿಯವರು ಡೆತ್ ನೋಟು ಪತ್ತೆಯಾಗಿದ್ದು, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಎಂದು ಉಲ್ಲೇಖಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ. ಮಹಿಳೆ ಜೊತೆಗಿನ ಶ್ರೀಗಳ ವಿಡಿಯೋ ಚಾಟ್ ಲೀಕ್ ಆಗಿದೆ.
ಶ್ರೀಗಳ ವಿಡಿಯೋ ಚಾಟ್ ದೃಶ್ಯ ಲೀಕ್ ಆಗುತ್ತಿದ್ದಂತೆ ರಾಮನಗರ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಡಿಯೋ ಚಾಟ್ ನ ಇನ್ನೊಂದು ಬದಿಯಲ್ಲಿ ಮಾತನಾಡಿರುವ ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ಸಂಶಯದ ಆಧಾರದಲ್ಲಿ ಕೆಲ ಮಹಿಳೆಯರ ವಿಚಾರಣೆ ನಡೆಸುತ್ತಿದ್ದಾರೆ. ಗೌಪ್ಯ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ವಿಡಿಯೋ ಚಾಟ್ ನಲ್ಲಿರುವ ಮಹಿಳೆ ಯಾರು ಎನ್ನುವ ಬಗ್ಗೆ ಪ್ರಶ್ನೆ ಮೂಡಿದೆ. ಆದರೆ ಪೊಲೀಸ್ ವಿಚಾರಣೆ ಆ ಮೂವರು ಮಹಿಳೆಯರು ನಾವಲ್ಲ ನಾವಲ್ಲ ಎಂದು ಉತ್ತರ ನೀಡಿದ್ದಾರೆ. ವಿಡಿಯೋದಲ್ಲಿರುವ ಮಹಿಳೆ ಯಾರು ಎಂಬುದು ಗೊತ್ತಾದರೆ ಇಡೀ ಪ್ರಕರಣದ ಹಿಂದಿರುವ ಗ್ಯಾಂಗ್ ಬಯಲಿಗೆ ಬರಲಿದೆ.
ಕುಂಚಗಲ್ ಸ್ವಾಮೀಜಿ ಕೆಳಗಿಳಿಸಲು ಮತ್ತೋರ್ವ ಸ್ವಾಮೀಜಿಯಿಂದ ಮಾಸ್ಟರ್ ಪ್ಲಾನ್ ನಡೆದಿತ್ತು, ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ರು, ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಆತನ ಗಾಳಕ್ಕೆ ಬಲಿಯಾದೆ ಎಂದು ಬಸವಲಿಂಗಶ್ರೀ ಡೆತ್ನೋಟ್ ಬರೆದಿದ್ದಾರೆ ಎನ್ನಲಾಗಿದೆ.ಒಟ್ಟಿನಲ್ಲಿ ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್ ಗೆ ಬಲಿಯಾಗಿರುವ ಕುರಿತಂತೆ ಶಂಕೆ ವ್ಯಕ್ತವಾಗಿದೆ.
ಸ್ವಾಮೀಜಿ ವಿರುದ್ಧ ಹನಿಟ್ರ್ಯಾಪ್ ನಡೆದಿದ್ದು, ಡೆತ್ನೋಟ್ನಲ್ಲಿ ಸಂಚಿನ ಬಗ್ಗೆ ಕುಂಚಗಲ್ ಬಂಡೆಮಠದ ಬಸವಲಿಂಗಶ್ರೀ ಸ್ವಾಮೀಜಿ ಬರೆದಿದ್ದಾರೆ. ಕುಂಚಗಲ್ ಸ್ವಾಮೀಜಿ ಕೆಳಗಿಳಿಸಲು ಮತ್ತೋರ್ವ ಸ್ವಾಮೀಜಿಯಿಂದ ಮಾಸ್ಟರ್ ಪ್ಲಾನ್ ನಡೆದಿತ್ತು, ನನ್ನ ಮಠವನ್ನು ಕಿತ್ತುಕೊಳ್ಳಬೇಕು, ನಾನು ಅವರ ಕಂಟ್ರೋಲ್ನಲ್ಲಿರಬೇಕು, ಇದೇ ಕಾರಣಕ್ಕೆ ಮಠಕ್ಕೆ ಆ ಸ್ವಾಮೀಜಿ ಓರ್ವ ಯುವತಿಯನ್ನು ಬಿಟ್ಟಿದ್ರು, ಆ ಯುವತಿಯ ಸಲುಗೆಗೆ ಮರುಳಾಗಿ ನಾನು ಹೆಣ್ಣಿನ ಮೋಹಕ್ಕೆ ಬಿದ್ದಿದ್ದೆ. ಆತನ ಗಾಳಕ್ಕೆ ಬಲಿಯಾದೆ ಎಂದು ಬಸವಲಿಂಗಶ್ರೀ ಡೆತ್ನೋಟ್ ಬರೆದಿದ್ದಾರೆ ಎನ್ನಲಾಗಿದೆ.
BIG NEWS : ʻರಷ್ಯಾಕ್ಕೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವುದನ್ನು ನಿಲ್ಲಿಸಿʼ: ಇರಾನ್ಗೆ ಯುಎಸ್ ಕರೆ
ಡಾಲಿಯ ‘ಹೆಡ್ ಬುಷ್’ ವಿವಾದ : ‘ಟ್ವಿಟರ್’ ನಲ್ಲಿ ಟ್ರೆಂಡ್ ಆಯ್ತು #WeStandWithDhananjaya ಹ್ಯಾಷ್ ಟ್ಯಾಗ್
BIGG UPDATE : ಬೆಳಗಾವಿಯಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ ವೃದ್ಧ ಸಾವು, 90 ಕ್ಕೂ ಹೆಚ್ಚು ಮಂದಿ ಅಸ್ವಸ್ಥ