ನವದೆಹಲಿ : ಐಸಿಸಿ ಟಿ20 ವಿಶ್ವಕಪ್ ಭರ್ಜರಿಯಾಗಿ ನಡೆಯುತ್ತಿದೆ ಮತ್ತು ಈ ವಾರದ ಟಿ20 ಶ್ರೇಯಾಂಕವನ್ನ ಸಹ ಪ್ರಕಟವಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಅದ್ಭುತ ಇನ್ನಿಂಗ್ಸ್ ಆಧಾರದ ಮೇಲೆ ರ್ಯಾಂಕಿಂಗ್ನಲ್ಲಿ ಸುಧಾರಣೆ ಮಾಡಿದ್ದಾರೆ. ಅದೇ ಸಮಯದಲ್ಲಿ, ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್ ಇತ್ತೀಚಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಸೋಲಾನುಭವಿಸಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ನ ಡೆವೊನ್ ಕಾನ್ವೇ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರತಿ ವಾರ ಬರುವ ಐಸಿಸಿ ಶ್ರೇಯಾಂಕಗಳನ್ನ ಬಿಡುಗಡೆ ಮಾಡಲಾಗಿದೆ. ಭಾರತದ ಇಬ್ಬರು ಬ್ಯಾಟ್ಸ್ ಮನ್’ಗಳು ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂಪರ್ 12ರಲ್ಲಿ ಪಾಕಿಸ್ತಾನದ ವಿರುದ್ಧ ಅಜೇಯ 82ರನ್’ಗಳ ಇನ್ನಿಂಗ್ಸ್’ನಿಂದ ಅವರು ಅಪಾರ ಪ್ರಯೋಜನ ಪಡೆದಿದ್ದಾರೆ. ಕೊಹ್ಲಿ ಈಗ 15 ರಿಂದ 9ನೇ ಸ್ಥಾನಕ್ಕೆ ಏರಿದ್ದಾರೆ. ಆದಾಗ್ಯೂ, ಅವರು ಈ ವರ್ಷದ ಫೆಬ್ರವರಿಯಲ್ಲಿ ಪುನರಾಗಮನ ಮಾಡಿದರು. ಆದ್ರೆ, ಮತ್ತೆ ಜಾರಿದರು. ಸೂರ್ಯಕುಮಾರ್ ಒಂದು ಸ್ಥಾನವನ್ನ ಕಳೆದುಕೊಂಡಿದ್ದಾರೆ ಮತ್ತು ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.
ಇತ್ತೀಚಿನ ರ್ಯಾಕಿಂಗ್’ನಲ್ಲಿ ಯಾರು ಇದ್ದಾರೆ?
ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 849 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ನ ಕಾನ್ವೇ 831 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಪ್ರವೇಶಿಸಿದ್ದಾರೆ. ಸೂರ್ಯಕುಮಾರ್ ಯಾದವ್ 828 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ದಕ್ಷಿಣ ಆಫ್ರಿಕಾದ ಮಾರ್ಕ್ರಮ್ 762 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ಐಸಿಸಿ ಟಿ20 ಬ್ಯಾಟಿಂಗ್ ರ್ಯಾಂಕಿಂಗ್.!
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) 849
- ಡೆವೊನ್ ಕಾನ್ವೇ (ನ್ಯೂಜಿಲೆಂಡ್) 831
- ಸೂರ್ಯಕುಮಾರ್ ಯಾದವ್ (ಭಾರತ) 828
- ಬಾಬರ್ ಅಜಮ್ (ಪಾಕಿಸ್ತಾನ) 799
- ಐಡೆನ್ ಮಾರ್ಕ್ರಮ್ (ದಕ್ಷಿಣ ಆಫ್ರಿಕಾ) 762
- ಡೇವಿಡ್ ಮಲಾನ್ (ಇಂಗ್ಲೆಂಡ್) 754
- ಆ್ಯರೋನ್ ಫಿಂಚ್ (ಆಸ್ಟ್ರೇಲಿಯಾ) 681
- ಪಥುಮ್ ನಿಶಾಂಕಾ (ಶ್ರೀಲಂಕಾ) 658
- ವಿರಾಟ್ ಕೊಹ್ಲಿ (ಭಾರತ) 635
- ಮೊಹಮ್ಮದ್ ವಾಸಿಮ್ (ಯುಎಇ) 626