ಧಾರವಾಡ: ಶಿವಮೊಗ್ಗದಲ್ಲಿ ಇತ್ತೀಚಿಗೆ ನಡೆದ ಕೆಲ ಗಲಭೆಗಳಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾರಣ ಎಂದು ಹುಬ್ಬಳ್ಳಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭೀತಿಯಿಂದ ಇವೆಲ್ಲ ಅವಾಂತರ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪ ಬಂದ ಸಂದರ್ಭದಲ್ಲಿ ಇವೆಲ್ಲ ನಡೆಯುತ್ತಿವೆ. ಕೆ.ಎಸ್.ಈಶ್ವರಪ್ಪರ ಮಾತಿನಿಂದಲೆ ಅಲ್ಲಿ ಗಲಭೆಗಳು ಆಗುತ್ತಿವೆ. ಈಶ್ವರಪ್ಪರನ್ನು ಹದ್ದುಬಸ್ತಿನಲ್ಲಿ ಇಟ್ಟರೆ ಎಲ್ಲವೂ ಸರಿಹೋಗುತ್ತೆ ಎಂದು ವಾಗ್ದಾಳಿ ಮಾಡಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಅದೇ ಜಿಲ್ಲೆಯವರು, ಆದರೆ ಅವರು ಬರೀ ಹೋಮ್ಗೆ ಮಾತ್ರ ಸೀಮಿತ, ಮಿನಿಸ್ಟರ್ ಅಲ್ಲ. ಅವರ ಮನೆಯಲ್ಲೇ ಯಾರೋ ಅವರ ಮಾತು ಕೇಳುತ್ತಿಲ್ಲ. ಇನ್ನು ಹೊರಗಿನವರು ಏನ್ ಕೇಳುತ್ತಾರೆ. ಚುನಾವಣಾ ಸಂದರ್ಭದಲ್ಲಿ ಇಂಥದ್ದನ್ನು ನಡೆಸೋದೆ ಪಕ್ಷದ ಪಾಲಿಸಿಯಾಗಿದ್ದರೇ ಏನೂ ಮಾಡಲಾಗಲ್ಲ. ಶಿವಮೊಗ್ಗ, ಮಂಗಳೂರು ಸೇರಿ ಕರಾವಳಿಯಲ್ಲಿ ಇಂಥದ್ದನ್ನು ಮಾಡಲಾಗುತ್ತಿದೆ ಎಂದರು.