ಚಾಮರಾಜನಗರ: ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಈ ನಡುವೆ ಇಂದು ಮಲೆ ಮಹದೇಶ್ವರನ ದೀಪಾವಳಿ ರಥೋತ್ಸವದಲ್ಲಿ ಕಂಡುಬಂದಿದೆ.
BIGG NEWS: ಕೊನೆಗೂ ದರ ಇಳಿಸಿದ ಓಲಾ: ಕಿ.ಮೀಗೆ ಈಗ 35 ರಿಂದ 45 ರೂ. ಫಿಕ್ಸ್!
ಚಾಮರಾಜನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ. ಬೆಟ್ಟದಲ್ಲಿ ನೆಲಸಿರುವ ಮಲೆಮಾದಪ್ಪ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಈ ಬೆಟ್ಟದಲ್ಲಿ ವರ್ಷಕ್ಕೆ ಒಂದಲ್ಲ, ಎರಡಲ್ಲ, ಮೂರು ಬಾರಿ ಅಂದರೆ ಶಿವರಾತ್ರಿ, ಯುಗಾದಿ ಹಾಗೂ ದೀಪಾವಳಿಯಂದು ರಥೋತ್ಸವ ನಡೆಯುತ್ತದೆ.
BIGG NEWS: ಕೊನೆಗೂ ದರ ಇಳಿಸಿದ ಓಲಾ: ಕಿ.ಮೀಗೆ ಈಗ 35 ರಿಂದ 45 ರೂ. ಫಿಕ್ಸ್!
ಇದೇ ರೀತಿ ಈ ಬಾರಿಯು ಬೆಟ್ಟದಲ್ಲಿಂದು ಮಾದಪ್ಪನ ದೀಪಾವಳಿ ರಥೋತ್ಸವ ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಂಭ್ರಮ ಸಡಗರಗಳೊಂದಿಗೆ ನಡೆಯಿತು.ಉಘೇ, ಉಘೇ, ಮಾದಪ್ಪ ಎನ್ನುತ್ತಾ, ಅಸಂಖ್ಯಾತ ಮಂದಿ ಭಕ್ತರು ಮಾದಪ್ಪನ ತೇರು ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ಮಹಿಳೆಯರಂತು ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.