ನವದೆಹಲಿ: : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಮಹಾತ್ಮಾ ಗಾಂಧಿ ಅವರ ಭಾವಚಿತ್ರದೊಂದಿಗೆ ಕರೆನ್ಸಿ ನೋಟುಗಳ ಮೇಲೆ ಗಣೇಶ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಹಾಕುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ದೇವರುಗಳ ಫೋಟೋಗಳನ್ನು ಕರೆನ್ಸಿಗಳ ಮೇಲೆ ಹಾಕುವುದರಿಂದ ದೇಶದ ಜನರು ಆರ್ಥಿಕತೆಯನ್ನು ಸುಧಾರಿಸುವ ಪ್ರಯತ್ನ ನಡೆಯುತ್ತದೆ ಅಂತ ಅವರು ಹೇಳಿದ್ದಾರೆ.
ಇದೇ ವೇಳೆ ಅವರು “ಲಕ್ಷ್ಮಿಯು ಸಮೃದ್ಧಿಯ ದೇವತೆ ಮತ್ತು ಗಣೇಶನು ತೊಂದರೆಗಳನ್ನು ದೂರವಿಡುವ ದೇವರು” ಅಂತ ಅವರು ಹೇಳಿದ್ದಾರೆ. ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಭಾರತದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿದೆ ಎಂದು ಹೇಳುವ ಮೂಲಕ ಅವರು ತಮ್ಮ ಭಾಷಣವನ್ನು ಆರಂಭಿಸಿದ್ದು, ಇದೇ ವೇಳೆ ಅವರು ಆರ್ಥಿಕತೆಯು ಸುಧಾರಿಸುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳಿವೆ, ಇದರಲ್ಲಿ ಹೆಚ್ಚಿನ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುವುದು ಮತ್ತು ದೇಶದಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವುದು ಸೇರಿವೆ ಎಂದು ಅವರು ಹೇಳಿದರು.
केंद्र सरकार से Appeal है
गांधी जी के साथ Currency पर लक्ष्मी जी और गणेश जी की तस्वीर हो, देश की बिगड़ती अर्थ व्यवस्था को आशीर्वाद मिलेगा—कई कदम उठाने चाहिए, उसमें से ये भी एक है।
दिवाली पर हम सबने समृद्धि के लिए लक्ष्मी जी और विघ्नहर्ता गणेश जी की पूजा की।
—CM @ArvindKejriwal pic.twitter.com/KGwmmTuniR
— AAP (@AamAadmiParty) October 26, 2022