ನವದೆಹಲಿ: ಇತ್ತೀಚೆಗೆ ವ್ಯಕ್ತಿಯೊಬ್ಬ ತಾನು ಆರ್ಡರ್ ಮಾಡಿದ ವಿಸ್ತಾರಾ ಫ್ಲೈಟ್ ಮೀಲ್ನಲ್ಲಿ ಸತ್ತ ಜಿರಳೆ ಕಂಡುಬಂದಿದೆ ಎಂದು ಹೇಳಿಕೊಂಡಿದ್ದು, ಅದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಿಕುಲ್ ಸೋಲಂಕಿ ಮುಂಬೈನಿಂದ ಬ್ಯಾಂಕಾಕ್ಗೆ ಏರ್ ವಿಸ್ತಾರಾ ವಿಮಾನ ಹತ್ತಿ ಊಟಕ್ಕೆ ಆರ್ಡರ್ ಮಾಡಿದ್ದರು. ಆದರೆ, ಅವರ ಊಟದಲ್ಲಿ ಸತ್ತ ಜಿರಲೆಯಂತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತ್ರ, ಈ ಬಗ್ಗೆ ಕ್ಯಾಬಿನ್ ಸಿಬ್ಬಂದಿಗೆ ದೂರು ನೀಡಿದ್ದಲ್ಲದೆ, ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಅದರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
Small cockroach in air Vistara meal pic.twitter.com/SHxFxB4qWv
— NIKUL SOLANKI (@manikul008) October 14, 2022
ಇದಕ್ಕೆ ಪ್ರತಿಕ್ರಿಯಿಸಿರುವ ಏರ್ ವಿಸ್ತಾರಾ, ʻನಿಕುಲ್ ನೀವು ಊಟದಲ್ಲಿದ್ದುದನ್ನು ಜಿರಳೆ ಎಂದು ಭಾವಿಸಿದ್ದೀರಿ. ಆದ್ರೆ, ಅದು ಜಿರಳೆಯಲ್ಲ. ಅದು ಹುರಿದ ಶುಂಠಿʼ ಎಂದು ಭರವಸೆ ನೀಡಿದೆ.
ಆಹಾರ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರಲ್ಲಿ ಯಾವುದೇ ಕೀಟ ಕಂಡುಬಂದಿಲ್ಲ ಎಂದು ಏರ್ ವಿಸ್ತಾರಾ ತಿಳಿಸಿದೆ. ಟೆಲಿಸ್ಕೋಪ್ನಲ್ಲಿ ಪರೀಕ್ಷಿಸಿದಾಗ ಜಿರಳೆ ಎಂದು ಭಾವಿಸಲಾಗಿದ್ದು, ಅದು ಕೇವಲ ಹುರಿದ ಶುಂಠಿ ಎಂದು ಕಂಡುಬಂದಿದೆ. ಆದರೂ ನಿಕುಲ್ ಸೋಲಂಕಿ ಅವರಿಗೆ ಇನ್ನೂ ಮನವರಿಕೆಯಾಗಿಲ್ಲ ಮತ್ತು ಲ್ಯಾಬ್ ವರದಿಯನ್ನು ತನಗೆ ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ.
BIGG NEWS : ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ‘ ವಿಜಯೇಂದ್ರ ಹೆಸರಲ್ಲಿ ಅಶ್ವಮೇಧ ಯಾಗ ‘ | B.Y Vijayendra
BIG NEWS : ʻಹಿಜಾಬ್ʼ ಧರಿಸಿದ ಮಹಿಳೆಯನ್ನು ʻಭಾರತದ ಪ್ರಧಾನಿʼಯಾಗಿ ನೋಡಲು ನಾನು ಬಯಸುತ್ತೇನೆ: ಓವೈಸಿ | WATCH VIDEO
BIGG NEWS: ಗಂಧದ ಗುಡಿ ಪೋಸ್ಟರ್ ಕಟ್ಟಿಕೊಂಡು ದೇವಿರಮ್ಮ ಬೆಟ್ಟ ಹತ್ತಿದ ಅಭಿಮಾನಿ..!; ಬೆನ್ನಿಗೆ ಅಪ್ಪು ಬಾವುಟ
BIGG NEWS : ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ‘ ವಿಜಯೇಂದ್ರ ಹೆಸರಲ್ಲಿ ಅಶ್ವಮೇಧ ಯಾಗ ‘ | B.Y Vijayendra