ಬೆಂಗಳೂರು: ನಗರದಲ್ಲಿ ಸುಲಿಗೆ, ದೌರ್ಜನ್ಯ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಅಕ್ರಮ ಸಂಬಂಧಕ್ಕೆ ತೊಂದರೆ ಆಯ್ತು ಅಂತ ಹೇಳಿ ಪತ್ನಿಯೇ ಪತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
BIGG NEWS: ಗಂಧದ ಗುಡಿ ಪೋಸ್ಟರ್ ಕಟ್ಟಿಕೊಂಡು ದೇವಿರಮ್ಮ ಬೆಟ್ಟ ಹತ್ತಿದ ಅಭಿಮಾನಿ..!; ಬೆನ್ನಿಗೆ ಅಪ್ಪು ಬಾವುಟ
ಮೃತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಚಂದ್ರಶೇಖರ್ ಪತ್ನಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಹಿಂದೂಪುರದ ಸುರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ ಮತ್ತು ಶ್ವೇತಾ ಕಳೆದ ನಾಲ್ಕು ವರ್ಷಗಳ ಹಿಂದೆ ಮದುವೆ ಯಾಗಿದ್ದರು. ಇಬ್ಬರ ನಡುವೆ ಹದಿನಾರು ವರ್ಷದ ಅಂತರ ಇತ್ತು. ಆದರೂ ಅಕ್ಕನ ಮಗಳು ಅನ್ನೋ ಕಾರಣಕ್ಕೆ ಮನೆಯವರು ಬಲವಂತದಿಂದ ಮದುವೆ ಮಾಡಿಸಿದ್ದರು.ಮದುವೆಯಾದ ಬಳಿಕ ಇಬ್ಬರ ಸಂಸಾರ ಸರಿ ಇರಲಿಲ್ಲ. ಶ್ವೇತಾಗೆ ಕಾಲೇಜು ಗೆಳೆಯರು ಹಾಗೂ ಬೇರೆ ಸ್ನೇಹಿತರ ವಿಚಾರಕ್ಕೆ ಹಲವಾರು ಬಾರಿ ಜಗಳ ಆಗಿದೆ. ಇತ್ತ ಸುರೇಶ್ ಎಂಬಾತನ ಜೊತೆಗೂ ಶ್ವೇತಾ ಸಂಪರ್ಕದಲ್ಲಿದ್ದಳು. ಇಷ್ಟು ಮಾತ್ರವಲ್ಲದೇ ಪತಿ ಇಲ್ಲದ ಸಮಯದಲ್ಲಿ ಇಬ್ಬರು ಸೇರುತ್ತಿದ್ದರು. ಈ ನಡುವೆ ಪತಿ ಇದ್ದರೆ ಇದೆಲ್ಲಾ ಕಷ್ಟ ಅಂದುಕೊಂಡ ಶ್ವೇತಾಳಿಗೆ ಆತನನ್ನೆ ಇಲ್ಲದಂತೆ ಮಾಡು ಎಂದು ಸುರೇಶ್ ಐಡಿಯಾ ಕೊಟ್ಟಿದ್ದಾನೆ.