ಚಿಕ್ಕಮಗಳೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ವರ್ಷ ಕಳೆದಿದೆ. ಆದರೂ ಅಭಿಮಾನಿಗಳು ಮಾತ್ರ ಅಪ್ಪು ನೆನಪಿಗಾಗಿ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ.
ಹಚ್ಚೆ ಹಾಕಿಸಿಕೊಂಡವರು ಏಕೆ ರಕ್ತದಾನ ಮಾಡಬಾರದು ಗೊತ್ತಾ ? ಇಲ್ಲಿದೆ ಕಾರಣ…! ವೈದ್ಯರ ಸಲಹಗಳೇನು?
ಚಿಕ್ಕಮಗಳೂರಿನಲ್ಲಿ ನಡೆದ ದೇವಿರಮ್ಮನ ಜಾತ್ರೆಯಲ್ಲೂ ಅಬಿಮಾನಿಗಳು ಪುನೀತ್ ರನ್ನು ಸ್ಮರಿಸಿ ತಮ್ಮ ಅಭಿಮಾನ ಮೆರೆದಿದ್ದಾರೆ.ಇಲ್ಲಿನ ಅರವಿಂದ ನಗರದ ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬ ದೇವಿರಮ್ಮನ ಬೆಟ್ಟ ಹತ್ತುವಾಗ ಅಪ್ಪು ಭಾವಚಿತ್ರ ಇರುವ ಟೀ ಶರ್ಟ್ ಧರಿಸಿ, ಭುಜದ ಮೇಲೆ ಅಪ್ಪು ಬ್ಯಾನರ್ ಹಿಡಿದು ಬ್ಯಾನರ್ ಹಿಡಿದು ಬೆಟ್ಟ ಹತ್ತಿ ಗಮನ ಸೆಳೆದಿದ್ದಾರೆ.
ಹಚ್ಚೆ ಹಾಕಿಸಿಕೊಂಡವರು ಏಕೆ ರಕ್ತದಾನ ಮಾಡಬಾರದು ಗೊತ್ತಾ ? ಇಲ್ಲಿದೆ ಕಾರಣ…! ವೈದ್ಯರ ಸಲಹಗಳೇನು?
ತಾಲೂಕಿನ ಮಲ್ಲೇನಹಳ್ಳಿಯಲ್ಲಿರುವ ಬಿಂಡಿಗ ದೇವಿರಮ್ಮ ದೇವಾಸ್ಥಾನ ಸಮುದ್ರಮಟ್ಟದಿಂದ ಸುಮಾರು 3.800 ಅಡಿ ಎತ್ತರದಲ್ಲಿದೆ. ಇಲ್ಲಿನ ದೇವಿ ಬಿಂಡಿಗ ದೇವಿರಮ್ಮನಿಗೆ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಬೆಟ್ಟ ಹತ್ತಿ ಹೋಗಿ ಸೇವೆ ಸಲ್ಲಿಸುತ್ತಾರೆ.
ಚಿಕ್ಕಮಗಳೂರಿನಲ್ಲಿ ಕ್ಯಾಂಟೀನ್ ಇಟ್ಟುಕೊಂಡಿರುವ ರವಿ ಅವರು ಅಪ್ಪು ರವಿ ಎಂದೇ ಫೇಮಸ್ ಆಗಿದ್ದು, ಬೆಟ್ಟ ಹತ್ತುವಾಗ ಟೀ ಶರ್ಟ್ ನಲ್ಲಿ ಹಿಂದೆ- ಮುಂದೆ ಅಪ್ಪು ಫೋಟೋ ಕೈನಲ್ಲಿದ್ದ ಕನ್ನಡದ ಬಾವುಟದಲ್ಲೂ ಅಪ್ಪು ಫೋಟೋ ಹಿಡಿದು ಸಂಭ್ರಮಿಸಿದರು.