ಖಾರ್ಗೋನ್ (ಮಧ್ಯಪ್ರದೇಶ): ಇಂಧನ ಟ್ಯಾಂಕರ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬಿಸ್ತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಜನಗಾಂವ್ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಟ್ಯಾಂಕರ್ ಇಂದೋರ್ನಿಂದ ಖಾರ್ಗೋನ್ ಕಡೆಗೆ ಹೋಗುತ್ತಿತ್ತು. ಅಂಜನಗಾಂವ ಗ್ರಾಮದ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿದೆ.
ಇದನ್ನು ಕಂಡ ಅಂಜನಗಾಂವ್ ಗ್ರಾಮದ ಜನರು ಟ್ಯಾಂಕರ್ನಿಂದ ಇಂಧನವನ್ನು ಸಂಗ್ರಹಿಸಲು ಅಲ್ಲಿಗೆ ಜಮಾಯಿಸಿದರು. ಈ ವೇಳೆ ಟ್ಯಾಂಕರ್ಗೆ ಬೆಂಕಿ ತಗುಲಿದ್ದು, ಸ್ಫೋಟಗೊಂಡಿದೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾರ್ಗೋನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖಾರ್ಗೋನ್ ಶಾಸಕ ರವಿ ಜೋಶಿ ಹೇಳಿದ್ದಾರೆ.
BIGG NEWS : ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ : ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ
BREAKING NEWS : `ಇಂಗ್ಲಿಷ್ ಮಾಸ್ಟರ್’ ಖ್ಯಾತಿಯ `ಗುಡಿಬಂಡೆ ಜಗನ್ನಾಥ್’ ಇನ್ನಿಲ್ಲ| Gudibande Jagannath no more
BIGG NEWS : ಕಾಂಗ್ರೆಸ್ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ : ಸೋನಿಯಾ, ರಾಹುಲ್ ಗಾಂಧಿ ಅಭಿನಂದನೆ