ಚಾಮರಾಜನಗರ: ಸಮಸ್ಯೆ ಕೇಳಲು ಬಂದಿದ್ದ ಮಹಿಳೆಗೆ ಸಚಿವ ವಿ. ಸೋಮಣ್ಣ ವಿರುದ್ಧ ಪೊಲೀಸರಿಗೆ ದೂರು ಕೊಡುವಂತೆ ವಿವಿಧ ಸಂಘಟನೆಗಳಿಂದ ಕೊಲೆ ಬೆದರಿಕೆ ಬರುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ವಿ.ಸೋಮಣ್ಣ ಕಾರ್ಯಕ್ರಮವೊಂದರಲ್ಲಿ ಕೆಂಪಮ್ಮ ಎಂಬ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಳು. ಅದಾದ ಬಳಿಕ ಕೆಂಪಮ್ಮ ಮಾತನಾಡಿ, ಸಚಿವರು ನನಗೆ ಹೊಡೆದಿಲ್ಲ. ಅವರ ಮೇಲೆ ತಪ್ಪು ಅಪವಾದ ಹೊರಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಇದೀಗ ವಿವಿಧ ಸಂಘಟನೆಗಳು ಸೋಮಣ್ಣ ವಿರುದ್ಧ ದೂರು ನೀಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೆಂಪಮ್ಮ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಗುಂಡ್ಲುಪೇಟೆ ತಾಲೂಕಿನ ರೈತ ಸಂಘ, ತಾಲೂಕು ನಾಯಕ ಹಿತರಕ್ಷಣಾ ಸಮಿತಿ, ತಾಲೂಕು ದಸಂಸ, ತಾಲೂಕು ಕೆಆರ್ಎಸ್ ಪಾರ್ಟಿ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.ಕೆಂಪಮ್ಮ ದೂರಿನಲ್ಲಿ, ಸೋಮಣ್ಣ ಹೊಡೆದಿದ್ದಾರೆಂದು ಹೇಳಿಕೆ ನೀಡು. ಪೊಲೀಸರಿಗೆ ದೂರು ಕೊಡು. ಇಲ್ಲದಿದ್ದರೆ ವಾಸ ಮಾಡಲು ಬಿಡುವುದಿಲ್ಲ ಎಂದು ವಿವಿಧ ಸಂಘಟನೆಗಳಿಂದ ಪ್ರಾಣ ಬೆದರಿಕೆ ಇದೆ. ನನಗೆ ರಕ್ಷಣೆ ನೀಡಿ ಎಂದು ತಿಳಿಸಿದ್ದಾರೆ.