ನವದೆಹಲಿ: ಪಳೆಯುಳಿಕೆ ಇಂಧನ(Fossil Fuel) ಬಳಕೆಯಿಂದಾಗಿ ಭಾರತದಲ್ಲಿ ಪ್ರತಿ 2 ನಿಮಿಷಕ್ಕೆ 1 ಕ್ಕಿಂತ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ಮತ್ತು ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದು ಅನೇಕರ ಸಾವಿಗೆ ಕಾರಣವಾಗಿದೆ ಎಂದು ಹೊಸ ವರದಿ “ಆರೋಗ್ಯ ಮತ್ತು ಹವಾಮಾನ ಬದಲಾವಣೆಯ ಲ್ಯಾನ್ಸೆಟ್ ಕೌಂಟ್ಡೌನ್ (Lancet Countdown on Health and Climate Change)” ಹೇಳಿದೆ.
ಪಳೆಯುಳಿಕೆ ಇಂಧನದ ಗೀಳಿನ ವಿರುದ್ಧ ಸರ್ಕಾರಗಳನ್ನು ಎಚ್ಚರಿಸಿದೆ ಮತ್ತು ಆರೋಗ್ಯ ಕಾರ್ಯಕ್ರಮಗಳನ್ನು ಬಲಪಡಿಸುವಂತೆ ಒತ್ತಾಯಿಸಿದೆ. ಪಳೆಯುಳಿಕೆ ಇಂಧನಗಳಿಗೆ ನೀಡುತ್ತಿರುವ ನಿರಂತರ ಸಬ್ಸಿಡಿಗಳು ಮತ್ತು ಆದ್ಯತೆಯು ಆಹಾರದ ಅಭದ್ರತೆ, ಸಾಂಕ್ರಾಮಿಕ ರೋಗ ಹರಡುವಿಕೆ, ಶಾಖ-ಸಂಬಂಧಿತ ರೋಗಗಳು, ಶಕ್ತಿಯ ಬಡತನ ಮತ್ತು ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಸಾವುಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅದು ಹೇಳುತ್ತದೆ.
2020 ರಲ್ಲಿ ಪಳೆಯುಳಿಕೆ ಇಂಧನ ದಹನದಿಂದ ಹೊರ ಬರುವ ಕಣಗಳಿಂದ ಭಾರತದಲ್ಲಿ 330,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಅಂದಾಜಿಸಿದೆ. ಅಂದರೆ ಪ್ರತಿ ಎರಡು ನಿಮಿಷಕ್ಕೆ 1ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಹೇಳಿದೆ. ಇನ್ನೂ, ಚೀನಾ ಸುಮಾರು 380,000 ಸಾವುಗಳಿಗೆ ಕಾರಣವಾಗಿದ್ದರೆ, ಯುರೋಪ್ನಲ್ಲಿ ಇದು 117,000 ಆಗಿದೆ. ಯುಎಸ್ನಲ್ಲಿ, ಸರಿಸುಮಾರು 32,000 ಸಾವುಗಳು ಕಣಗಳ ಮಾಲಿನ್ಯಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಮೂರನೇ ಒಂದು ಭಾಗವು ಪಳೆಯುಳಿಕೆ ಇಂಧನಗಳಿಗೆ ಸಂಬಂಧಿಸಿದೆ.
BREAKING NEWS : ವಿವಾದದ ಸುಳಿಯಲ್ಲಿ ‘ಹೆಡ್ ಬುಷ್’ ಚಿತ್ರ : ನಟ ಡಾಲಿ ಧನಂಜಯ್ ಹೇಳಿದ್ದೇನು..? |Actor Dhananjay