ಬೆಂಗಳೂರು : ಜನರ ಮೇಲೆ ಪಟಾಕಿ ಎಸೆದು ಪುಂಡಾಟ ನಡೆಸಿದ ಗ್ಯಾಂಗ್ ಒಂದು ಪ್ರಶ್ನಿಸಿದ್ದಕ್ಕೆ ಮೂಳೆ ಮುರಿಯುವಂತೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಜ್ಞಾನ ಭಾರತಿ ವ್ಯಾಪ್ತಿಯ ಮಾರುತಿ ನಗರದಲ್ಲಿ ನಡೆದಿದೆ.
ಪುಂಡರ ಗುಂಪು ಬೆಳಗ್ಗೆಯಿಂದಲೂ ಏರಿಯಾದಲ್ಲಿ ಓಡಾಡುತ್ತಿದ್ದವರ ಮೇಲೆ ಪಟಾಕಿ ಎಸೆಯುತ್ತಿತ್ತು, ಮಹಿಳೆಯರು ಹಾಗೂ ವೃದ್ದರ ಮೇಲೆ ಪಟಾಕಿ ಎಸೆದು ವಿಕೃತಿ ಮೆರೆಯುತ್ತಿದ್ದರು. ಇದನ್ನು ಪ್ರಶ್ನಿಸಿದ ಮಹಾದೇವಸ್ವಾಮಿ ಎಂಬಾತನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ.
ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳು ಕುತ್ತಿಗೆಯ ಮೂಳೆ ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ಮಹದೇವಸ್ವಾಮಿ ಜ್ಞಾನ ಭಾರತಿ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
BREAKING NEWS : ವಿವಾದದ ಸುಳಿಯಲ್ಲಿ ‘ಹೆಡ್ ಬುಷ್’ ಚಿತ್ರ : ನಟ ಡಾಲಿ ಧನಂಜಯ್ ಹೇಳಿದ್ದೇನು..? |Actor Dhananjay