ಬೆಂಗಳೂರು: ರಾಜ್ಯದಲ್ಲಿ ಇನ್ನೇನು ಚಳಿಗಾಲ ಶುರುವಾಯ್ತು. ಈ ಮಧ್ಯೆ ಶಾಲೆಗಳಿಗೆ ಮಕ್ಕಳು ಹೋಗುತ್ತಿದ್ದಾರೆ. ಹೀಗಾಗಿ ಅವರು ಪಾಲಿಕೆ ಅಧಿಕಾರಿಗಳಿಗೆ ಬಿಬಿಎಂಪಿ ಶಾಲಾ ಮಕ್ಕಳು ಸ್ವೆಟರ್ಸ್ ಗಾಗಿ ಅಂಗಲಾಚುತ್ತಿದ್ದಾರೆ.
BREAKING NEWS : ಕೊಯಮತ್ತೂರು ಕಾರು ಸ್ಪೋಟ ಪ್ರಕರಣ : ಐವರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ಆದರೆ ಅವರು ಮಾತ್ರ ಕೇಳಿದ್ರೂ ಕೇಳಾದ ಹಾಗೆ ವರ್ತಿಸುತ್ತಿದ್ದಾರೆ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಳಿಗಾಲ ಸಮೀಪಿಸುತ್ತಿದೆ. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸ್ವೆಟರ್ಸ್ಗಳು ಹಾಳಾಗಿ ಮೂಲೆ ಸೇರಿವೆ. ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಶಾಲಾ ಮಕ್ಕಳಿಗೆ ಸ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ. ಅರ್ಧ ವರ್ಷವೇ ಮುಗಿದ್ರೂ ಸಿಗದ ಸ್ವೆಟರ್ಸ್ ಗಳಿಗಾಗಿ 25 ಸಾವಿರ ಮಕ್ಕಳು ಜಾತಕಪಕ್ಷಿಗಳಂತಾಗಿದ್ದಾರೆ. ಶಾಲೆಗಳತ್ತ ಹೋದ್ರೆ ಸಾಕು, ನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್..ಪ್ಲೀಸ್.. ಎಂದು ಅಂಗಲಾಚುತ್ತಿದ್ದಾರೆ.
BREAKING NEWS : ಕೊಯಮತ್ತೂರು ಕಾರು ಸ್ಪೋಟ ಪ್ರಕರಣ : ಐವರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ
ಚಳಿಗಾಲ ಶುರುವಾದ್ರೂ ಬಿಬಿಎಂಪಿ ಶಾಲೆಯ ಬರೋಬ್ಬರಿ 25 ಸಾವಿರ ಮಕ್ಕಳಿಗೆ ಇನ್ನೂ ಸ್ವೆಟರ್ಸ್ ವಿತರಣೆಯಾಗಿಲ್ಲ. ಸ್ವೆಟರ್ಸ್ ವಿತರಣೆಯಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಪರಿಹಾರವೇನು? ಎಂದು ಕೇಳಿದ್ರೆ ಹೊಸದೊಂದು ಪ್ಲಾನ್ ಹಾಕ್ಕೊಂಡು ಕೂತಿದ್ದೇವೆ ಅಂತಾರೆ ಪಾಲಿಕೆ ಅಧಿಕಾರಿಗಳು.ಮಕ್ಕಳ ಪೋಷಕರ ಖಾತೆಗೆ ಸ್ವೆಟರ್ಸ್ಗೆ ನಿಗದಿಯಾಗಿರುವಷ್ಟು ಹಣವನ್ನು ಜಮಾ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳುತ್ತಾರೆ.