ಮಂಡ್ಯ : ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ 14 ದಿನದಲ್ಲೇ 638 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ‘ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದ 14 ದಿನಗಳೊಳಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಮಂಡ್ಯ ಜಿಲ್ಲಾ ಪೊಲೀಸರಿಗೆ ಅಭಿನಂದನೆಗಳು, ಗೌರವಾನ್ವಿತ ಸಿಎಂಗೆ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕರಣ ಸಂಬಂಧ ತನಿಖೆ ಮುಗಿಸಿ ತನಿಖಾ ವರದಿ, ವೈಜ್ಞಾನಿಕ ಸಾಕ್ಷಿಗಳನ್ನು ಘಟನೆ ನಡೆದ 14 ದಿನಗಳ ಒಳಗಡೆ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ನ್ಯಾಯಾಲಯದ ವಿಚಾರಣೆಗಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಡಿಜಿಪಿ ಅಂಡ್ ಐಜಿಪಿ ತನಿಖಾ ತಂಡಕ್ಕೆ 1 ಲಕ್ಷ ನಗದು ಬಹುಮಾನ ಘೋಷಿಸಿ ಅಭಿನಂದಿಸಿದೆ.
ಘಟನೆ ಹಿನ್ನೆಲೆ
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ನಡೆದಿದೆ. ಬಾಲಕಿಯನ್ನು ಟ್ಯೂಷನ್ ಗೆ ಕರೆಸಿಕೊಂಡ ಶಿಕ್ಷಕ ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಸಾಭೀತಾಗಿದೆ. ಟ್ಯೂಷನ್ ಗೆ ಬಂದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಪೋಷಕರಿಗೆ ಗೊತ್ತಾದರೆ ಅಪಾಯ ಎಂದು ಭಾವಿಸಿದ ಈತ ಬಾಲಕಿ ತಲೆಗೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ , ಬಳಿಕ ಸಂಪ್ ಗೆ ಎಸೆದಿದ್ದಾನೆ .
ಟ್ಯೂಷನ್ ಗಾಗಿ ಮನೆಯಿಂದ ಹೋಗಿದ್ದ ವಿದ್ಯಾರ್ಥಿನಿ ಬಳಿಕ ಮನೆಗೆ ವಾಪಸ್ ಬಂದಿರಲಿಲ್ಲ. ನಂತರ ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದ ಸಮೀಪದಲ್ಲಿ ಪರಿಶೀಲಿಸಿದಾಗ ನೀರಿನ ಸಂಪ್ ಒಳಗೆ ಬಾಲಕಿಯ ಶವ ಪತ್ತೆಯಾಗಿತ್ತು.
BIG NEWS: ಡೆಂಗ್ಯೂ ರೋಗಿಗೆ ಡ್ರಿಪ್ನಲ್ಲಿ ʻಮೊಸಂಬೆ ಜ್ಯೂಸ್ʼ ನೀಡಿದ್ದ ಯುಪಿ ಆಸ್ಪತ್ರೆಗೆ ಈಗ ಬುಲ್ಡೋಜರ್ ಭಯ
BIGG NEWS : ನ. 1 ರಿಂದ 35 ಕ್ಷೇತ್ರಗಳಲ್ಲಿ ಜೆಡಿಎಸ್ ‘ಪಂಚರತ್ನ ರಥಯಾತ್ರೆ’ : ಎಲ್ಲೆಲ್ಲಿ ಸಾಗಲಿದೆ ಗೊತ್ತಾ..?
BREAKING NEWS : ಕೊಯಮತ್ತೂರು ಕಾರು ಸ್ಪೋಟ ಪ್ರಕರಣ : ಐವರು ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನ