ಮೈಸೂರು : ಹಬ್ಬದ ದಿನವೇ ಮೈಸೂರಿನಲ್ಲಿ ಗಲಾಟೆ ನಡೆದಿದ್ದು, ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೃತನನ್ನು ರಾಜಸ್ಥಾನ ಮೂಲದ ಸುರೇಶ್ (23) ಎಂದು ಗುರುತಿಸಲಾಗಿದೆ.
ಅಂಗ್ರೇಜ್ ರಾಮ್ ಎಂಬ ಆರೋಪಿ ಸುರೇಶ್ ಮೇಲೆ ಕಟ್ಟಿಗೆಯಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ. ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಮತ್ತು ರಾಮ್ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಮರದ ಪೀಸ್ ನಿಂದ ಸುರೇಶ್ ಮೇಲೆ ರಾಮ್ ಹಲ್ಲೆ ನಡೆಸಿದ್ದಾನೆ. ಪರಿಣಾಮ ಕೆಳಗೆ ಬಿದ್ದು ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.