ಬೆಂಗಳೂರು : ಕನ್ನಡ ಚಿತ್ರನಟಿಗೆ ಬ್ಲಾಕ್ ಮೇಲ್ ಮಾಡಿ, ನಗ್ನ ಫೋಟೋ, ವಿಡಿಯೋ ಮೂಲಕ ಬೆದರಿಕೆಯೊಡ್ಡಿ 30 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮೇಕಪ್ ಮ್ಯಾನ್ ಸೆರೆಯಾಗಿದ್ದಾನೆ.
ಕನ್ನಡದ ಚಿತ್ರನಟಿಯೊಬ್ಬರ ನಗ್ನ ವಿಡಿಯೋ ಹಾಗೂ ಫೊಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಲು ಯತ್ನಿಸಿದ ಮಹಾಂತೇಶ್ ಎಂಬಾತನನ್ನು ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಭುವನೇಶ್ವರ ನಗರದ ನಿವಾಸಿ ಮಹಾಂತೇಶ್ ಸಂತ್ರಸ್ತ ನಟಿಯ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದನು, ಅಲ್ಲದೇ ನಟಿಯ ಸಂಬಂಧಿಕನಾಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಟ್ಯಾಂಗೋ ಎಂಬ ಸಬ್ ಆ್ಯಪ್ ನ ಚಂದಾದಾರರಾಗಿದ್ದ ನಟಿಯು ಆ್ಯಪ್ ನಲ್ಲಿ ತಮ್ಮ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಹಾಕಿ ಹಣ ಸಂಪಾದಿಸುತ್ತಿದ್ದರು. ಅಲ್ಲದೇಆ್ಯಪ್ ಮೂಲಕ ಅಪರಿಚಿತ ವ್ಯಕ್ತಿಗಳ ಜೊತೆ ಆನ್ ಲೈನ್ ವಿಡಿಯೋ ಚಾಟ್ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನೂ ನಟಿಯ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಮಹಾಂತೇಶ್ ಈ ವಿಚಾರ ಕಲೆಹಾಕಿದ್ದನು.
ನಂತರ ನಟಿ ಬಳಸುತ್ತಿದ್ದ ಆ್ಯಪ್ ನ ಯೂಸರ್ ನೇಮ್ ಹಾಗೂ ಪಾಸ್ ವರ್ಡ್ ಕದ್ದ ಮಹಾಂತೇಶ್ ನಟಿಯ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ಕದ್ದಿದ್ದಾನೆ. ನಂತರ ನಟಿಗೆ ‘ ನಿನ್ನ ನಗ್ನ ಫೋಟೋ, ವಿಡಿಯೋ ನನ್ನ ಬಳಿ ಇದೆ , 30 ಲಕ್ಷ ಕೊಡದೇ ಇದ್ದಲ್ಲಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬ್ರಿಟನ್ ಪಿಎಂ ʻರಿಷಿ ಸುನಕ್ʼರನ್ನು ವಿಶೇಷ ರೀತಿಯಲ್ಲಿ ಅಭಿನಂದಿಸಿದ ʻಅಮುಲ್ ʼ| Amul Congratulates Rishi Sunak
BIGG NEWS : ಇಂದು ರಾಜ್ಯದ ಎಲ್ಲ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ `ಗೋಪೂಜೆ’ : ಸಚಿವ ಪ್ರಭು ಚವ್ಹಾಣ್ ಮಾಹಿತಿ
ಮಹಿಳೆಗೆ ಕಪಾಳ ಮೋಕ್ಷ : ಸಚಿವ ವಿ.ಸೋಮಣ್ಣಗೆ ಸಂಕಷ್ಟ : ಮಹಿಳಾ ಆಯೋಗಕ್ಕೆ ಕಾಂಗ್ರೆಸ್ ದೂರು