ಬೆಂಗಳೂರು : ಬೆಂಗಳೂರಿನಲ್ಲಿ(ಅ.25) ಇಂದು ಸೂರ್ಯ ಗ್ರಹಣದ ವೇಳೆಯೇ ಉಪಹಾರ ಸೇವನೆ ಮಾಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.
ಬೆಂಗಳೂರಿನಲ್ಲಿ ಮೂಡನಂಬಿಕೆ ವಿರೋಧಿ ವೇದಿಕೆ ಸದಸ್ಯರು ಇಂದು ಗ್ರಹಣದ ಹೊತ್ತಲ್ಲಿ ಹಣ್ಣು ಹಂಪಲು, ತಿಂಡಿ ಸೇವಿಸಿ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಗ್ರಹಣದ ಹೊತ್ತಲ್ಲಿ ಉಪಹಾರ ಸೇವನೆ ಮಾಡಬಾರದು ಎಂಬ ನಂಬಿಕೆಯಿದೆ, ಗ್ರಹಣ ಕಳೆದ ನಂತರ ಸ್ನಾನ ಮಾಡಿ ಉಪಹಾರ ಸೇವಿಸಬೇಕು ಎಂಬ ಆಚರಣೆಯಿದೆ.
ಕರ್ನಾಟಕದ ಹಲವು ಕಡೆ ಅ.25 ಇಂದು ಸೂರ್ಯಗ್ರಹಣ ಗೋಚರಿಸಿದ್ದು, ರಾಜ್ಯದ ಜನರು ಕುತೂಹಲದಿಂದ ಗ್ರಹಣ ವೀಕ್ಷಿಸಿದ್ದಾರೆ, ರಾಜ್ಯದ ಬೆಂಗಳೂರು, ಬೀದರ್, ಹುಬ್ಬಳ್ಳಿ, ಕೊಪ್ಪಳ , ಮಂಗಳೂರು, ಧಾರವಾಡ, ರಾಯಚೂರು, ಮೈಸೂರು, ಕಲಬುರಗಿ,ಬಳ್ಳಾರಿ, ವಿಜಯಪುರ, ಶಿವಮೊಗ್ಗ, ಬಾಗಲಕೋಟೆ, ಹಾಸನ, ಉಡುಪಿ, ಮಂಡ್ಯ ಸೇರಿ ರಾಜ್ಯದ ಹಲವು ನಗರಗಳಲ್ಲಿ ಸೂರ್ಯಗ್ರಹಣ ಗೋಚರವಾಗಿದೆ.
ಮುಂದಿನ ಸೂರ್ಯಗ್ರಹಣವು 2027ರ ಆಗಸ್ಟ್ 2ರಂದು ಭಾರತದಲ್ಲಿ ಗೋಚರಿಸಲಿದೆ. ಇದು ಪರಿಪೂರ್ಣ ಸೂರ್ಯಗ್ರಹಣವಾಗಿರಲಿದೆ. ಆದರೆ, ಇದು ಭಾರತದ ಎಲ್ಲಾ ಭಾಗಗಳಲ್ಲೂ ಭಾಗಶಃ ಸೂರ್ಯಗ್ರಹಣದಂತೆ ಗೋಚರಿಸುತ್ತದೆ. ಅಮಾವಾಸ್ಯೆಯ ದಿನದಂದು ಚಂದ್ರನು ಪೃಥ್ವಿ ಮತ್ತು ಸೂರ್ಯನ ನಡುವೆ ಬಂದಾಗ ಮತ್ತು ಈ ಎಲ್ಲಾ 3 ಗ್ರಹಗಳು ಜೋಡಣೆಯಾದಾಗ(ಸಾಲುಗೂಡಿದಾಗ) ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ ಮುದ್ರಿಕೆಯು(ಡಿಸ್ಕ್) ಸೌರ ಮುದ್ರಿಕೆಯನ್ನು ಭಾಗಶಃ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.
BIG NEWS: ದೀಪಾವಳಿಯಂದು ಪುಣೆಯಲ್ಲಿ ಪಟಾಕಿಯಿಂದ 17 ಅಗ್ನಿ ಅವಘಡಗಳು ವರದಿ | firecrackers incidents in Pune