ಚಿಕ್ಕಬಳ್ಳಾಪುರ : ಅ.25 ರಂದು ಇಂದು ಸೂರ್ಯಗ್ರಹಣ ಇರುವುದರಿಂದ ಸೂರ್ಯಗ್ರಹಣ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಂದಿಬೆಟ್ಟಕ್ಕೆ ದೌಡಾಯಿಸಿದ್ದಾರೆ.
ಚಿಕ್ಕಬಳ್ಳಾಪುರ, ಬೆಂಗಳೂರಿನಿಂದ ಬಂದಂತಹ ಸಾವಿರಾರು ಮಂದಿ ಪ್ರವಾಸಿಗರು ನಂದಿಬೆಟ್ಟದಲ್ಲಿ ಸೂರ್ಯ ಗ್ರಹಣ ವೀಕ್ಷಿಸುತ್ತಿದ್ದಾರೆ. ಗ್ರಹಣದ ಹಿನ್ನೆಲೆ ಬೆಟ್ಟದ ಮೇಲಿರುವ ದೇಗುಲವನ್ನು ಬಂದ್ ಮಾಡಲಾಗಿದ್ದು, ನಂದಿಬೆಟ್ಟದಲ್ಲಿ ಪ್ರವಾಸಿಗರು ಬಹಳ ಕುತೂಹಲದಿಂದ ಸೂರ್ಯ ಗ್ರಹಣ ವೀಕ್ಷಿಸಿದ್ದಾರೆ.
ಬೆಂಗಳೂರಿನಿಂದ 60 ಕಿ.ಮೀ. ಉತ್ತರಕ್ಕೆ ನಂದಿಬೆಟ್ಟ ಇರುತ್ತದೆ. ಈ ಬೆಟ್ಟವನ್ನು ಹಿಂದೆ ನಂದಿದುರ್ಗ ಎಂದು ಕರೆಯುತ್ತಿದ್ದರು. ನಂದಿಬೆಟ್ಟವು ಸಮುದ್ರ ಮಟ್ಟದಿಂದ 1478 ಮೀ ಮೇಲೆ ಇದೆ. ಸಾಹಸ ಕ್ರೀಡಾ ಪ್ರೇಮಿಗಳು ಈ ಬೆಟ್ಟದ ಮೇಲಿರುವ ಪ್ರಾಚೀನ ಕಾಲದ ಯೋಗ ನಂದೀಶ್ವರ ದೇವಸ್ಥಾನದ ಪಕ್ಕದಿಂದ ಪ್ಯಾರಾಸೈಕ್ಲಿಂಗ್ ಗೆ ಪ್ರಯತ್ನಿಸುತ್ತಾರೆ. ಯಾವಾಗಲೂ ಕೂಡ ನಂದಿಬೆಟ್ಟದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುತ್ತಾರೆ.
ಸಿಲಿಕಾನ್ ಸಿಟಿ ಖಾಲಿ ಖಾಲಿ
ಇನ್ನೂ,ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಜಾಗಗಳು ಇಂದು ಕೇತುಗ್ರಸ್ಥ ಸೂರ್ಯಗ್ರಹಣದ ಎಫೆಕ್ಟ್ ತಟ್ಟಿದಂತಾಗಿದ್ದು ಸಿಟಿಯಲ್ಲಿ ಜನರಿಲ್ಲದೇ ಖಾಲಿ ಖಾಲಿಯಾಗಿದೆ. ಹೌದು ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರವು ಬಗ್ಗೆ ಹಲವು ಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಗ್ರಹಣದ ಎಫೆಕ್ಟ್ ಕೇವಲ ರಾಶಿಗಳಿಗಷ್ಟೇ ಸೀಮಿತವಾಗದೇ, ಬದಲಾಗಿ ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನೇಕ ಕಡೆಗೂ ತಟ್ಟಿದೆ. ಗ್ರಹಣದ ಹಿನ್ನೆಲೆ ನಗರದಲ್ಲಿ ಜನರ ಓಡಾಟ ಹಲವೆಡೆ ವಿರಳವಾಗಿದ್ದ ಕಾರಣ ಬಹುತೇಕ ಜನನಿಬಿಡ ಪ್ರದೇಶಗಳು ನಿಶ್ಯಬ್ದವಾಗಿದೆ. ಬೆಂಗಳೂರಿನ ಸಂಚಾರ ನಾಡಿಗೂ ಗ್ರಹಣದ ಎಫೆಕ್ಟ್ ಜೋರಾಗಿಯೇ ತಟ್ಟಿದೆ.
ಪ್ರತಿನಿತ್ಯ ಲಕ್ಷಾಂತರ ಜನ ಬಳಸುವ ಬಿಎಂಟಿಸಿ ಇಂದು ಖಾಲಿ, ಖಾಲಿ ಓಡಾಡುತ್ತಿದ್ದ ದೃಶ್ಯಗಳಂತು ಸಾಮಾನ್ಯವಾಗಿತ್ತು. ಹೋಟೆಲ್ಗಳ ಕಥೆಯು ಇದಕ್ಕೇನು ಹೊರತಾಗಿಲ್ಲ. ಗ್ರಹಣದ ನಡುವೆಯೂ ಹಲವರು ಬೆಳಗ್ಗೆಯೇ ಹೋಟೆಲ್ಗಳನ್ನ ತೆರೆದಿದ್ದರೂ, ಜನ ಮಾತ್ರ ಹೊಟೇಲ್ ನತ್ತ ಮುಖ ಮಾಡಿಲ್ಲ. ಗ್ರಹಣದ ಎಫೆಕ್ಟ್ ಬಗ್ಗೆ ಮುಂಚೆಯೇ ಯೋಚಿಸಿದ್ದ ಕೆಲ ಹೊಟೇಲ್ನವರು ಇತರೆ ದಿನಕ್ಕಿಂತ ಕಡಿಮೆ ಆಹಾರ ಸಿದ್ದತೆ ಮಾಡಿಸಿದರು. ವ್ಯಾಪಾರವಾಗದ ಕಾರಣ ಹೊಟೇಲ್ ಅನ್ನು ಬಂದ್ ಮಾಡಿ ಮನೆಗೆ ಹೋಗುವಂತಾಯಿತು.
BIGG NEWS: ಶಾಸಕ ಬಸನಗೌಡ ಯತ್ನಾಳ್ ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ; ಅಸಾದುದ್ದೀನ್ ಓವೈಸಿ ವಾಗ್ದಾಳಿ