ಮಂಡ್ಯ: ನಾಡಿನೆಲ್ಲೆಡೆ ದೀಪಾವಳಿ ಹಬ್ಬ ಸಂಭ್ರಮ ಮನೆ ಮಾಡಿದೆ. ಆದರೆ ಮೇಲುಕೋಟೆಯಲ್ಲಿ ಮಾತ್ರ ಮೌನ ಆವರಿಸಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಶೋಕಾಚರಣೆ ಆಚರಿಸಲಾಗುತ್ತಿದೆ.ಟಿಪ್ಪುವಿನ ಆಡಳಿತದ ಅವಧಿಯಲ್ಲಿ ಮೇಲುಕೋಟೆಯಲ್ಲಿ ನಡೆದ ಮಂಡ್ಯ ಅಯ್ಯಂಗಾರರ ಹತ್ಯೆ ಖಂಡಿಸಿ ಶೋಕಾಚರಣೆ ಮತ್ತು ಪಂಜಿನ ಮೆರವಣಿಗೆ ನಡೆಸಲಾಯಿತು. ಮೃತ ಅಯ್ಯಂಗಾರರ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಹಿನ್ನೆಲೆ ಶೋಕಾಚರಣೆ ಮಾಡಲಾಯಿತು.
ಪಂಜಿನ ಮೆರವಣಿಗೆ ನಡೆಸುವ ಮೂಲಕ ಟಿಪ್ಪು ಕೃತ್ಯವನ್ನು ಹಿಂದೂ ಕಾರ್ಯಕರ್ತರು ಖಂಡಿಸಿದರು. ಕಳೆದ 2 ವರ್ಷಗಳಿಂದ ಮೇಲುಕೋಟೆ ಹತ್ಯಾಕಾಂಡ ಶೋಕಾಚರಣೆ ಸಮಿತಿ ವತಿಯಿಂದ ಕರಾಳ ದಿನಾಚರಣೆ ಆಚರಿಸಲಾಗುತ್ತಿದೆ. ಬಿಜೆಪಿ ಮುಖಂಡ ಡಾ. ಇಂದ್ರೇಶ್ ನೇತೃತ್ವದಲ್ಲಿ ಶೋಕಾಚರಣೆ ನಡೆಸಲಾಯಿತು. ಟಿಪ್ಪು ವಿರುದ್ಧ ಧಿಕ್ಕಾರ ಕೂಗಿ ಹಿಂದೂ ಕಾರ್ಯಕರ್ತರು ಈ ಕೃತ್ಯವನ್ನು ಖಂಡಿಸಿದರು.