ರಾಂಚಿ(ಜಾರ್ಖಂಡ್): ನಿನ್ನೆ ದೀಪಾವಳಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿದೆ. ಈ ಸಂಭ್ರಮದಲ್ಲಿದ್ದ ಚಾಲಕ-ಕಂಡಕ್ಟರ್ ತಮ್ಮ ಪ್ರಾಣ ಕಳೆದುಕೊಂಡಿರುವ ಘಟನೆ ರಾಂಚಿಯಲ್ಲಿ ನಡೆದಿದೆ.
ಚಾಲಕ ಮತ್ತು ಕಂಡಕ್ಟರ್ ಹಬ್ಬ ಆಚರಿಸಲೆಂದು ಬಸ್ನಲ್ಲಿ ಪೂಜೆ ಮಾಡಿ ದೀಪ ಹಚ್ಚಿದ್ದರು. ರಾತ್ರಿಯಾದ ಕಾರಣ ಅವರು ಬಸ್ನಲ್ಲೇ ಮಲಗಿದ್ದರು. ಈ ವೇಳೆ ಬಸ್ನಲ್ಲಿ ಹಚ್ಚಿಟ್ಟಿದ್ದ ದೀಪದಿಂದ ಬಸ್ಗೆಬೆಂಕಿ ತಗುಲಿದ್ದು, ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಬಸ್ನಲ್ಲಿ ಮಲಗಿದ್ದ ಚಾಲಕ-ಕಂಡಕ್ಟರ್ ಇಬ್ಬರೂ ಕೂಡ ಸಜೀವ ದಹನವಾಗಿದ್ದಾರೆ. ಮೃತರನ್ನು ಮದನ್ ಮತ್ತು ಖಲಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ರಾತ್ರಿ ಒಂದು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬಸ್ಸಿನಲ್ಲಿ ಬೆಂಕಿಯನ್ನು ನಿಯಂತ್ರಿಸಿದರು. ಬಸ್ಸಿನೊಳಗೆ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ.
BIGG NEWS : `AICC’ ಅಧ್ಯಕ್ಷರಾಗಿ ನಾಳೆ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸ್ವೀಕಾರ
SHOCKING NEWS: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದಕ್ಕೆ ವಿರೋಧ: ಯುವಕನನ್ನು ಚಾಕುವಿನಿಂದ ಇರಿದು ಕೊಂದ ಬಾಲಕರು
BIG BREAKING NEWS: ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು