ಶಿವಮೊಗ್ಗ: ನಿನ್ನೆ ತಡರಾತ್ರಿ ಶಿವಮೊಗ್ಗದ ವೆಂಕಟೇಶ ನಗರದ ಎ.ಎನ್.ಕೆ ರಸ್ತೆ ಬಳಿ ವಿಜಯ್ ವೈಯಕ್ತಿಕ ಕಾರಣಕ್ಕಾಗಿ ದುಷ್ಕರ್ಮಿಗಳು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ವಿಜಯ್ ತಾಯಿ ಶಾಂತಾ ಪ್ರತಿಕ್ರಿಯೆ ನೀಡಿದ್ದಾರೆ.
BIG BREAKING NEWS: ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ನನ್ನ ಮಗ ವಿಜಯ್ ಗೆ ಯಾರು ಶತ್ರುಗಳಿರಲಿಲ್ಲ. ಮದುವೆಯಾಗಿ ಏಳು ವರ್ಷ ಆಗಿದೆ. ಆದರೆ ಹೆಂಡತಿ ಜೊತೆಗೆ ಇಲ್ಲ ಎಂದಿದ್ದಾರೆ.ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದ. ಆದರೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಮೂರು ವರ್ಷ ಆಗಿತ್ತು. ವಿಜಯ್ ಕೆಲಸ ಬಿಟ್ಟು ಇಲ್ಲಿಗೆ ಬಂದು ಮೂರು ವರ್ಷ ಆಗಿದೆ. ವಿಜಯ್ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದನು. ರಾತ್ರಿ 2.3ರ ವೇಳೆಗೆ ಫೋನ್ ಬಂತು ಎಂದು ಹೋಗಿದ್ದ. ಈ ವೇಳೆ ಆತನ ಮೇಲೆ ಹಲ್ಲೆ ನಡೆದಿದೆ.
BIG BREAKING NEWS: ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
ಇನ್ನು ವಿಜಯ್ ಶಿವಮೊಗ್ಗದ ಭಾರತ ನ್ಯೋರೂ ಕ್ಲಿನಿಕ್ನಲ್ಲಿ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.ನಿನ್ನೆ ರಾತ್ರಿ ತಮ್ಮ ತಂದೆ ಹಾಗೂ ಕುಟುಂಬದವರ ಜೊತೆ ಚಲನಚಿತ್ರ ವೀಕ್ಷಣೆ ಮಾಡಿ ಮನೆಗೆ ಬಂದಿದ್ದಾರೆ. ಮನೆಗೆ ಬಂದ ವಿಜಯ್ಗೆ ಪೋನ್ ಬಂದಿದೆ. ತಕ್ಷಣ ವಿಜಯ್ ಮನೆಯಿಂದ ಹೊರಗೆ ಹೋಗಿದ್ದಾರೆ. ಪೋನ್ ಮಾಡಿದವರು ಎ.ಎನ್.ಕೆ ರಸ್ತೆಗೆ ಕರೆಯಿಸಿಕೊಂಡು ಕೊಲೆ ಮಾಡಿದ್ದಾರೆ