ಬೆಂಗಳೂರು : 1894 ರಲ್ಲಿ ನಿರ್ಮಿಸಲಾದ ಬೆಂಗಳೂರಿನಲ್ಲಿರುವ ಹೆಸರಘಟ್ಟ ಕೆರೆಯು 28 ವರ್ಷಗಳ ಸುದೀರ್ಘ ಅವಧಿಯ ನಂತರ ಭರ್ತಿಯಾಗಿದೆ.
1894 ರಲ್ಲಿ ನಿರ್ಮಿಸಲಾದ ಬೆಂಗಳೂರಿನಲ್ಲಿರುವ ಹೆಸರಘಟ್ಟ ಕೆರೆಯು ಬೆಂಗಳೂರಿನ ಹಲವಾರು ಭಾಗಗಳಿಗೆ ನೀರುಣಿಸಿದ್ದು, ಬರೋಬ್ಬರಿ, ಇದು 28 ವರ್ಷಗಳ ಸುದೀರ್ಘ ಅವಧಿ ನಂತರ ಭರ್ತಿಯಾಗಿದೆ.
ಅರ್ಕಾವತಿ ನದಿಯ ಜಲಾನಯನ ಪ್ರದೇಶ ಮತ್ತು ನಂದಿಬೆಟ್ಟದ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು ಹೆಚ್ಚಾಗಿದ್ದು, ಯಾವುದೇ ಸಮಯದಲ್ಲಿ ತುಂಬಿ ಕೋಡಿ ಹರಿಯಬಹುದು.ಬೆಂಗಳೂರಿನ ಉತ್ತರದಲ್ಲಿ 27ಕಿಮಿ ದೂರದಲ್ಲಿ ಹೆಸರುಘಟ್ಟ ಕೆರೆ ಇದೆ, ಈ ಕೆರೆಯು ಕೆಲವು ವರ್ಷಗಳ ಕಾಲ ಬೆಂಗಳೂರಿಗೆ ಕುಡಿಯುವ ನೀರನ್ನು ಪೂರೈಸುತ್ತಿತ್ತು.
ಅರ್ಕಾವತಿ ನದಿಯ ನೀರೇ ಕೆರೆಗೆ ಜಲಮೂಲ. ನೂರಾರು ವರ್ಷಗಳ ಕಾಲ ಈ ಕೆರೆಯ ನೀರೇ ನೀರಾವರಿಗೂ ಮೂಲ. ಮುಂದೆ 19ನೇ ಶತಮಾನದ ಅಂತ್ಯಕ್ಕೆ ಬೆಂಗಳೂರು ಬೆಳೆಯಲಾರಂಭಿಸಿತು. ಆಗ ನಗರಕ್ಕೆ ನೀರುಣಿಸುತ್ತಿದ್ದುದು ಧರ್ಮಾಂಬುಧಿ, ಸಂಪಂಗಿ, ಅಲಸೂರು, ಸ್ಯಾಂಕಿ ಕೆರೆಗಳು. ಆದರೆ, ವೇಗವಾಗಿ ಬೆಳೆಯುತ್ತಿದ್ದ ಬೆಂಗಳೂರಿನ ಒಡಲಿಗೆ ಈ ಕೆರೆಗಳ ನೀರು ಸಾಕಾಗಲಿಲ್ಲ. ಹೀಗಾಗಿ, ಆಗಿನ ದಿವಾನ್ ಕೆ. ಶೇಷಾದ್ರಿ ಅಯ್ಯರ್ 1894ರಲ್ಲಿ ಹೆಸರಘಟ್ಟ ಕೆರೆಯಿಂದ ನೀರುಣಿಸುವ ಯೋಜನೆ ರೂಪಿಸಿದರು. ಆಗಿನ ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಎಂ.ಸಿ. ಹಚಿನ್ಸನ್ ತಾಂತ್ರಿಕ ನೆರವು ನೀಡಿದರು. ಕೇವಲ ಎರಡೇ ವರ್ಷಗಳಲ್ಲಿ, ಅಂದರೆ, 1896 ಆಗಸ್ಟ್ ತಿಂಗಳ 7ನೇ ತಾರೀಖಿನಂದು ಹೆಸರಘಟ್ಟ ಯೋಜನೆ ಸಿದ್ಧವಾಯಿತು. ಬೆಂಗಳೂರಿನ ಆಗಿನ ಜನಸಂಖ್ಯೆ ಕೇವಲ ಎರಡು ಲಕ್ಷ ಐವತ್ತು ಸಾವಿರ. ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರಿನಂತೆ ಸತತ 37 ವರ್ಷ ಕಾಲ ನೀರುಣಿಸಿದ ಹಿರಿಮೆ ಈ ಕೆರೆಯದು.
Vehicle Insurance : ವಾಹನ ಸವಾರರಿಗೆ ಮುಖ್ಯ ಮಾಹಿತಿ ; ಈ ‘ಡಾಕ್ಯುಮೆಂಟ್’ ಹೊರೆಯಲ್ಲ, ಪ್ರಯೋಜನಗಳ ಆಗರ
BIGG UPDATE : ಸಿಲಿಕಾನ್ ಸಿಟಿಯಲ್ಲಿ ‘ಪಟಾಕಿ’ ಅವಘಡ : ಬೆಂಗಳೂರಿನ ವಿವಿಧೆಡೆ 9 ಮಂದಿ ಆಸ್ಪತ್ರೆಗೆ ದಾಖಲು