ರಾಯಚೂರು: ಚಲಿಸುತ್ತಿರುವಾಗಲೇ ಚಾಲಕನಿಗೆ ಹೃದಯಾಘಾತವಾಗಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಬಳಿ ಘಟನೆ ನಡೆದಿದೆ.
31 ಪ್ರಯಾಣಿಕರನ್ನು ಹೊತ್ತು ಸಾಗಿದ ಬಸ್ ಚಿಕ್ಕಹೆಸರೂರು ಬಳಿ ಬರುತ್ತಿದ್ದಂತೆ ಚಾಲಕ ಶ್ರೀನಿವಾಸ್ಗೆ ಹೃದಯಾಘಾತವಾಗಿದೆ. ಈ ವೇಳೇ ಬಸ್ ನಿಯಂತ್ರಣ ತಪ್ಪಿದ್ದು, ಪಕ್ಕದಲ್ಲಿದ್ದ ಹೊಲಕ್ಕೆ ಪಲ್ಟಿಯಾಗಿದೆ, ಈ ವೇಳೆ ಪ್ರಯಾಣಿಕರ ಪೈಕಿ 14 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಅವರಿಗೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಈ ವೇಳೆಯಲ್ಲಿ 51 ವರ್ಷದ ಬಸ್ ಚಾಲಕ ಶ್ರೀನಿವಾಸ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ರಾಜಹಂಸ ಬಸ್ ನಿರ್ವಾಹಕ ಗೋವಿಂದ್ರಿಂದ ಪೋಲಿಸರು ಮಾಹಿತಿ ಪಡೆದುಕೊಂಡಟಿದ್ದು ಪ್ರಕರಣ ಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.