ಬೆಂಗಳೂರು : ಸಂಪುಟ ವಿಸ್ತರಣೆಗೆ ಹಲವು ಕಸರತ್ತುಗಳು ನಡೆದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್ ಆಗಿದೆ. ಖಾಲಿ ಇರುವ 6 ಸ್ಥಾನ ಭರ್ತಿಗೆ ನಿರ್ಧಾರ ಮಾಡಿದ್ದು, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ನವಂಬರ್ ಮೊದಲ ವಾರದಲ್ಲೇ ಸಂಪುಟ ವಿಸ್ತರಣೆ ನಡೆಯಲಿದೆ ಎನ್ನಲಾಗಿದೆ.
ಹೌದು, ರಾಜ್ಯ ಸಚಿವ ಸಂಪುಟದಲ್ಲಿ ವಿಸ್ತರಣೆಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ನವೆಂಬರ್ ಮೊದಲ ವಾರದಲ್ಲೇ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳು ಭರ್ತಿ ಆಗುವ ಸಾಧ್ಯತೆ ಇದೆ.
ಸಚಿವ ಸ್ಥಾನದಲ್ಲಿ ರೇಸ್ ನಲ್ಲಿ ಯಾರಿದ್ದಾರೆ..?
1) ಸಿ ಪಿ ಯೋಗೇಶ್ವರ್- ಹಳೇ ಮೈಸೂರು- ಒಕ್ಕಲಿಗ ಕೋಟಕೆ .ಎಸ್ ಈಶ್ವರಪ್ಪ – ಕುರುಬ ಕೋಟ
2)ರಮೇಶ್ ಜಾರಕಿಹೊಳಿ- ವಲಸಿಗ ಹಾಗೂ ಎಸ್ ಟಿ ಕೋಟ
3)ಪೂರ್ಣಿಮಾ ಶ್ರೀನಿವಾಸ್- ಮಹಿಳೆ/ ಯಾದವ ಕೋಟ
4)ನರಸಿಂಹ ನಾಯಕ ರಾಜೂಗೌಡ- ಕಲ್ಯಾಣ ಕರ್ನಾ ಟಕ ಹಾಗೂ ಎಸ್ ಟಿ ಕೋಟ
5) ಎಂಪಿ ರೇಣುಕಾಚಾರ್ಯ – ಮಧ್ಯ ಕರ್ನಾಟಕ: ಲಿಂಗಾಯತ ಕೋಟ
ಆರೋಪ ಮುಕ್ತರಾದ ಬಳಿಕ ಸಚಿವ ಸ್ಥಾನಕ್ಕಾಗಿ ಕೆ.ಎಸ್ ಈಶ್ವರಪ್ಪ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ನನಗೆ ಸಚಿವ ಸ್ಥಾನ ನೀಡದಿದ್ದರೆ ನಾನು ಕಾಂಗ್ರೆಸ್ ಹಾಗೂ ರಾಜ್ಯದ ಜನತೆ ಪಾಲಿಗೆ ಖಾಯಂ ಆರೋಪಿತನಾಗುತ್ತೇನೆ ಎಂದಿದ್ದಾರೆ. ಹಳೇ ಮೈಸೂರು ಭಾಗದ ಒಕ್ಕಲಿಗ ಕೋಟದಲ್ಲಿ ಸಿ.ಪಿ ಯೋಗೇಶ್ವರ್ಗೆ ಸ್ಥಾನ ನೀಡಲು ನಿರ್ಧಾರ ಮಾಡಲಾಗಿದೆ. ಸಿಡಿ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಅವರಿಗೆ ಸಿಡಿ ಕೇಸ್ ಮುಳುವಾಗಿತ್ತು..? ಮತ್ತೆ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುತ್ತಾ ಎಂಬುದನ್ನು ಕಾದು ನೋಡಬೇಕು.
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ವಿಚಾರ ಭಾರೀ ಚರ್ಚೆಯಲ್ಲಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರುಗಳ ಭಾರೀ ಕಸರತ್ತಿನ ನಂತರ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ಸೇರಲು ಹಲವಾರು ಮಂತ್ರಿಗಳು ರೇಸ್ ನಲ್ಲಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿದೆ.
ಸಂಪುಟದಲ್ಲಿ ಖಾಲಿ ಇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿದೆ.
ಕುರುಬ ಸಮುದಾಯದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಲಸಿಗ ಹಾಗೂ ಎಸ್.ಟಿ.ಕೋಟದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಹಳೇ ಮೈಸೂರು ಭಾಗದಿಂದ ಒಕ್ಕಲಿಗ ಕೋಟಾದಡಿ ಸಿ.ಪಿ.ಯೋಗೇಶ್ವರ್, ಮಹಿಳೆ ಮತ್ತು ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್, ಕಲ್ಯಾಣ ಕರ್ನಾ ಟಕ ಭಾಗ ಮತ್ತು ಎಸ್.ಟಿ ಕೋಟಾದ ನರಸಿಂಹ ನಾಯಕ ರಾಜೂಗೌಡ ಮತ್ತಿತರಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.
ಸಚಿವ ಸೋಮಣ್ಣ ಒಳ್ಳೆಯ ಮನಸ್ಸಿನವರು, ಬೇಕು ಅಂತ ಹೀಗೆ ಮಾಡಿಲ್ಲ – ಸಚಿವ ಆರ್ ಅಶೋಕ್
‘ಶಿಷ್ಯ ವೇತನ’ದ ಕುರಿತು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ