ರಾಯಚೂರು : ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ರಾಯಚೂರಿನಲ್ಲಿ ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜಹಂಸ ಬಸ್ ರಾಯಚೂರಿನಿಂದ ಬೆಳಗಾವಿಗೆ ಹೊರಟಿತ್ತು, ಚಿಕ್ಕಹೆಸೂರು ಗ್ರಾಮದ ಬಳಿ ಬರುತ್ತಿದಂತೆ ಚಾಲಕನಿಗೆ ಹೃದಯಾಘಾತವಾಗಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಕ್ಕದ ಜಮೀನಿಗೆ ಹೋಗಿ ಉರುಳಿ ಬಿದ್ದಿದೆ. ಘಟನೆಯಲ್ಲಿ 14 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ್ದಾನೆ.
ಸಾಂದರ್ಭಿಕ ಚಿತ್ರ
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರ ಪತಿ ಜಾನ್ ಶಾ ನಿಧನ | John Shaw,
BIG NEWS: 2023 ರಲ್ಲಿ ‘5G’ ಸೇವೆಯ ಆದಾಯ ಜಾಗತಿಕವಾಗಿ $ 315 ಬಿಲಿಯನ್ ತಲುಪಲಿದೆ : ವರದಿ | 5G Service