ಬೆಂಗಳೂರು : ರಾಜ್ಯ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ಕಿದ್ದು. ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್ ಆಗಿದೆ ಎನ್ನಲಾಗಿದೆ.
ರಾಜ್ಯ ಸಚಿವ ಸಂಪುಟದಲ್ಲಿ ವಿಸ್ತರಣೆಗೆ ಕೇಂದ್ರ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದ್ದು, ನವೆಂಬರ್ ಮೊದಲ ವಾರದಲ್ಲೇ ಸಂಪುಟದಲ್ಲಿ ಖಾಲಿ ಇರುವ ಆರು ಸ್ಥಾನಗಳು ಭರ್ತಿ ಆಗುವ ಸಾಧ್ಯತೆ ಇದೆ.
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ವಿಚಾರ ಭಾರೀ ಚರ್ಚೆಯಲ್ಲಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರುಗಳ ಭಾರೀ ಕಸರತ್ತಿನ ನಂತರ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ಸೇರಲು ಹಲವಾರು ಮಂತ್ರಿಗಳು ರೇಸ್ ನಲ್ಲಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಸಂಪುಟದಲ್ಲಿ ಖಾಲಿ ಇರುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿದೆ.
ಕುರುಬ ಸಮುದಾಯದಿಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಲಸಿಗ ಹಾಗೂ ಎಸ್.ಟಿ.ಕೋಟದಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಹಳೇ ಮೈಸೂರು ಭಾಗದಿಂದ ಒಕ್ಕಲಿಗ ಕೋಟಾದಡಿ ಸಿ.ಪಿ.ಯೋಗೇಶ್ವರ್, ಮಹಿಳೆ ಮತ್ತು ಯಾದವ ಸಮುದಾಯದ ಪೂರ್ಣಿಮಾ ಶ್ರೀನಿವಾಸ್, ಕಲ್ಯಾಣ ಕರ್ನಾ ಟಕ ಭಾಗ ಮತ್ತು ಎಸ್.ಟಿ ಕೋಟಾದ ನರಸಿಂಹ ನಾಯಕ ರಾಜೂಗೌಡ ಮತ್ತಿತರಿದ್ದಾರೆ. ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕು.
BIG NEWS: 2023 ರಲ್ಲಿ ‘5G’ ಸೇವೆಯ ಆದಾಯ ಜಾಗತಿಕವಾಗಿ $ 315 ಬಿಲಿಯನ್ ತಲುಪಲಿದೆ : ವರದಿ | 5G Service
APPS 16 : ಈ 16 ಅಪ್ಲಿಕೇಶನ್ ನಿಮ್ಮ ಮೊಬೈಲ್ನಲ್ಲಿ ಇದ್ದರೇ ಕೂಡಲೇ ಡಿಲೀಟ್ ಮಾಡಿ
APPS 16 : ಈ 16 ಅಪ್ಲಿಕೇಶನ್ ನಿಮ್ಮ ಮೊಬೈಲ್ನಲ್ಲಿ ಇದ್ದರೇ ಕೂಡಲೇ ಡಿಲೀಟ್ ಮಾಡಿ