ಚಿಕಾಗೋ: ಅಮೆರಿಕದ ಚಿಕಾಗೋದಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶೂಟೌಟ್ ನಡೆದ ಸ್ಥಳವನ್ನು ಪ್ರತಿನಿಧಿಸುವ ಚಿಕಾಗೋ ಆಲ್ಡರ್ ಮ್ಯಾನ್ ರೇಮಂಡ್ ಲೋಪೆಜ್, ಡ್ರ್ಯಾಗ್-ರೇಸಿಂಗ್ ಕಾರವಾನ್ ಗಳನ್ನು ಬ್ಯಾನ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
“ಇದು ಕೇವಲ ವಿನೋದ ಮತ್ತು ಹೊರಾಂಗಣ ಆಟವಲ್ಲ” ಎಂದು ಲೋಪೆಜ್ ಭಾನುವಾರ ಜೆರೋಮ್ ಅಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದ ವೇಳೆ ಅವರು “ಗ್ಯಾಂಗ್ಗಳು ಮತ್ತು ಅಪರಾಧಿಗಳು ಡ್ರ್ಯಾಗ್-ರೇಸಿಂಗ್ನಲ್ಲಿ ಭಾಗಿಯಾಗುವುದನ್ನು ನಾವು ನೋಡುತ್ತಿದ್ದೇವೆ” ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಚಿಕಾಗೋ ಪೊಲೀಸ್ ಇಲಾಖೆಯ ಕಮಾಂಡರ್ ಡಾನ್ ಜೆರೋಮ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ನೈಋತ್ಯ ಭಾಗದಲ್ಲಿರುವ ಬ್ರೈಟನ್ ಪಾರ್ಕ್ ನೆರೆಹೊರೆಯ ಪ್ರದೇಶದಲ್ಲಿ ಮುಂಜಾನೆ 4 ಗಂಟೆಗೆ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಹೇಳಿದರು.