ನವದೆಹಲಿ: ಟಿ-20 ವಿಶ್ವಕಪ್(T-20 World Cup)ನಲ್ಲಿ ಪಾಕಿಸ್ತಾನ ವಿರುದ್ಧ ಜಯಗಳಿಸಿದ ಭಾರತ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ(Prime Minister Narendra Modi) ಭಾನುವಾರ ಅಭಿನಂದಿಸಿದ್ದಾರೆ ಮತ್ತು ವಿರಾಟ್ ಕೊಹ್ಲಿ (Virat Kohli)ಅವರ ಅದ್ಭುತ ಇನ್ನಿಂಗ್ಸ್ಗಾಗಿ ಶ್ಲಾಘಿಸಿದ್ದಾರೆ.
“ಭಾರತ ತಂಡವು ಉತ್ತಮ ಹೋರಾಟದ ಗೆಲುವನ್ನು ಗಳಿಸಿದೆ! ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅಭಿನಂದನೆಗಳು. ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ಗಾಗಿ ಅಭಿನಂದನೆಗಳು. ನಿಮ್ಮ ಮುಂದಿನ ಪಂದ್ಯಗಳಿಗೆ ಶುಭಾಶಯಗಳು” ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
The India team bags a well fought victory! Congratulations for an outstanding performance today. A special mention to @imVkohli for a spectacular innings in which he demonstrated remarkable tenacity. Best wishes for the games ahead.
— Narendra Modi (@narendramodi) October 23, 2022
ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ (82*; 53 ಎಸೆತಗಳಲ್ಲಿ 6×4, 4×6) ಅಜೇಯ ಅರ್ಧಶತಕದೊಂದಿಗೆ ICC T20 ವಿಶ್ವಕಪ್ 2022ರ ಮೊದಲ ಸೂಪರ್ 12 ಪಂದ್ಯದಲ್ಲಿ ಟೀಮ್ ಇಂಡಿಯಾವನ್ನ ಗೆದ್ದರು.
ಪಾಕಿಸ್ತಾನ ನೀಡಿದ 160 ರನ್ಗಳ ಗುರಿಯನ್ನ ಬೆನ್ನೆತ್ತಿದ ಟೀಂ ಇಂಡಿಯಾ, ಕೊಹ್ಲಿಯವ್ರ ಭರ್ಜರಿ ಬ್ಯಾಟಿಂಗ್ನೊಂದಿಗೆ ಎದುರಾಳಿಯನ್ನ 6 ವಿಕೆಟ್ಗಳಿಂದ ಸೋಲಿಸಿತು.