ಕಲಬುರಗಿ : ಪೊಲೀಸರ ಮನೆಯಲ್ಲೇ ಚಾಲಾಕಿ ಕಳ್ಳರು ಕಳ್ಳತನ ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಕಲಬುರಗಿಯಲ್ಲಿನ ಇಬ್ಬರು ಪೊಲೀಸರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಲಬುರಗಿ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ನಿವೃತ್ತ ಕೆ ಎಸ್ ಆರ್ ಪಿ ಪೇದೆ ಸಿದ್ದಲಿಂಗಯ್ಯ ಹಿರೇಮಠ್ ಹಾಗೂ ಎಫ್ ಡಿ ಎ ಮಹಾಂತೇಶ್ ಹಂಗರಗಿ ಮನೆಯಲ್ಲಿ ನಡೆದಿದೆ. ಮಹಾಂತೇಶ್ ಬೆಂಗಳೂರಿನ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಎಫ್ ಡಿ ಎ ಆಗಿದ್ದಾರೆ.
ಸಿದ್ದಲಿಂಗಯ್ಯ ಮನೆಗೆ ನುಗ್ಗಿದ ಕಳ್ಳರು 10 ಗ್ರಾಂ ಚಿನ್ನ , 20 ಸಾವಿರ ಹಣ, 10 ರೇಷ್ಮೆ ಸೀರೆ ಕದ್ದಿದ್ದಾರೆ. ಮಹಾಂತೇಶ್ ಮನೆಯಲ್ಲಿ 50 ಗ್ರಾಂ ಚಿನ್ನ, 10,000 ರೂ ನಗದು ಹಾಗೂ 4 ಬೈಕ್ ಗಳ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ. ಪೊಲೀಸರ ಮನೆಗೆ ನಿಗ್ಗಿದ ಚಾಲಾಕಿ ಕಳ್ಳರು ಈ ಕೃತ್ಯ ಎಸಗಿದ್ದು, ಕೃತ್ಯದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
BREAKING NEWS: ಹಬ್ಬದ ವೇಳೆ ಹೆಚ್ಚಿನ ಪ್ರಯಾಣ ದರ ವಸೂಲಿ: ಖಾಸಗಿ ಬಸ್ಗಳ ಮೇಲೆ ಆರ್ಟಿಓ ಅಧಿಕಾರಿಗಳಿಂದ ದಾಳಿ
BREAKING NEWS: ದುಪ್ಪಟ್ಟು ದರ ವಸೂಲಿ: ಬೆಂಗಳೂರಿನ ಹಲವು ‘ಖಾಸಗಿ ಬಸ್’ಗಳ ಮೇಲೆ RTO ಅಧಿಕಾರಿಗಳ ದಾಳಿ