ಬೆಂಗಳೂರು : ಕಿಲ್ಲರ್ ರಸ್ತೆ ಗುಂಡಿ’ಗೆ ಮತ್ತೊಂದು ಬಲಿಯಾಗಿದ್ದು, ಹಬ್ಬಕ್ಕೆ ಊರಿಗೆ ಹೊರಟ ಕಾರ್ಮಿಕ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ.
ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋದ ಬೈಕ್ ಸವಾರ ಕಾರ್ಮಿಕ ತಿಪ್ಪೆಸ್ವಾಮಿ (45) ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಪಾವಗಡ ಮೂಲದ ತಿಪ್ಪೆಸ್ವಾಮಿ ಕುಟುಂಬ ನಿರ್ವಹಣೆಗಾಗಿ ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ಕೂಲಿ ಮಾಡಿ ವಾಸಿಸುತ್ತಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆ ಸ್ವಂತ ಊರು ಪಾವಗಡಕ್ಕೆ ಬೈಕ್ ನಲ್ಲಿ ತೆರಳುತ್ತಿದ್ದರು.
ಊರಿಗೆ ಹೋಗುವ ಸಂಧರ್ಭದಲ್ಲಿ ಬೆಂಗಳೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಮಾದಾವರ ಬಳಿ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ಪರಿಣಾಮ ಹಿಂದುಗಡೆ ಬರುತ್ತಿದ್ದ ಕಂಟೈನರ್ ಲಾರಿ ಹರಿದು ತಲೆಗೆ ಹಾಕಿದ್ದ ಹೆಲ್ಮೆಟ್ ಸಮೇತವಾಗಿ ತಲೆ ನುಜ್ಜುಗುಜ್ಜಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಕಿಲ್ಲರ್ ಗುಂಡಿಗೆ ಮಹಿಳೆಯೊಬ್ಬರು ಮೃತಪಟ್ಟು ಕೆಲವೇ ದಿನ ಕಳೆದಿದೆ. ಅಷ್ಟರಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ಸರ್ಕಾರ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕ ಜನರು ಬಲಿಯಾಗಬೇಕೋ ಗೊತ್ತಿಲ್ಲ.
BREAKING NEWS : ಮಣ್ಣಲ್ಲಿ ಮಣ್ಣಾದ ಡೆಪ್ಯೂಟಿ ಸ್ಪೀಕರ್ ‘ಆನಂದ ಮಾಮನಿ’ |Anand Mamani
‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಪ್ರಯತ್ನಗಳಿಗೆ ಶ್ರೀರಾಮನೇ ಸ್ಫೂರ್ತಿ ; ಪ್ರಧಾನಿ ಮೋದಿ
ಪಾಕಿಸ್ತಾನವನ್ನು ಸೋಲಿಸಿದ ಟೀಮ್ ಇಂಡಿಯಾವನ್ನು ಅಭಿನಂದಿಸಿದ ಅಮಿತ್ ಶಾ,